ಎಸ್.ಎಸ್.ಎಲ್.ಸಿಯಲ್ಲಿ 624 ಅಂಕ ಗಳಿಸಿ ಹೊಸನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಸುವಿಧಾ

0
2347

ಹೊಸನಗರ: ತಾಲ್ಲೂಕು ವರ್ತಕರ ಸಂಘದ ಕಾರ್ಯದರ್ಶಿಯಾದ ಹರೀಶ್ ಮತ್ತು ಕೆ.ರೇವತಿಯವರ ದಂಪತಿಯವರ ಪುತ್ರಿಯಾದ ಸುವಿಧಾರವರು ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 624 ಅಂಕಗಳನ್ನು ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ಕನ್ನಡದಲ್ಲಿ 125ಕ್ಕೆ 125 ಅಂಕ, ಇಂಗ್ಲೀಷ್‌ನಲ್ಲಿ 100ಕ್ಕೆ 100 ಅಂಕ, ಹಿಂದಿಯಲ್ಲಿ 100ಕ್ಕೆ 100 ಅಂಕ, ಗಣಿತದಲ್ಲಿ 100ಕ್ಕೆ 100 ಅಂಕ, ವಿಜ್ಞಾನದಲ್ಲಿ 100ಕ್ಕೆ 100 ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 99 ಅಂಕಗಳನ್ನು ಪಡೆದಿದ್ದಾರೆ. ಇವರು ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಸಿಂಚನಾಗೆ 623 ಅಂಕ :

ಹೊಸನಗರ ಗಂಗನಕೊಪ್ಪದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಹಾಗೂ ಲತಾ ದಂಪತಿಯ ಪುತ್ರಿಯಾದ ಸಿಂಚನಾ ಉಮೇಶ್‌ರವರು ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದಿದ್ದಾರೆ.

ಇವರಿಗೆ ಕನ್ನಡದಲ್ಲಿ 125ಕ್ಕೆ 125 ಅಂಕ, ಇಂಗ್ಲೀಷ್‌ನಲ್ಲಿ 100ಕ್ಕೆ 99 ಅಂಕ, ಹಿಂದಿ 100ಕ್ಕೆ 100 ಅಂಕ, ಗಣಿತ 100ಕ್ಕೆ 98 ಅಂಕ, ವಿಜ್ಞಾನ 100ಕ್ಕೆ 100ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಇವರು ಹೋಲಿ ರಿಡಿಮರ್ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ಸುಷ್ಮಾ ಎಂ.ಗೆ 610 ಅಂಕ:

ಹೊಸನಗರದ ಜೆಸಿಎಂ ರಸ್ತೆಯ ವಾಸಿ ರಾಮಚಂದ್ರಪುರ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಸುಜಾತ ಮೋಹನ್‌ರವರ ಪುತ್ರಿಯಾದ ಸುಷ್ಮಾ ಎಂ ರವರು ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 610 ಅಂಕಗಳನ್ನು ಪಡೆದಿದ್ದಾರೆ.

ಇವರಿಗೆ ಕನ್ನಡದಲ್ಲಿ 125ಕ್ಕೆ 121 ಅಂಕ, ಇಂಗ್ಲೀಷ್‌ನಲ್ಲಿ 100ಕ್ಕೆ 97 ಅಂಕ ಹಿಂದಿಯಲ್ಲಿ 100ಕ್ಕೆ 100 ಅಂಕ, ಗಣಿತದಲ್ಲಿ 100ಕ್ಕೆ 99 ಅಂಕ ವಿಜ್ಞಾನದಲ್ಲಿ 100ಕ್ಕೆ 95 ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 98 ಅಂಕಗಳನ್ನು ಪಡೆದಿದ್ದಾರೆ. ಇವರು ಹೋಲಿ ರೆಡಿಮರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಭೂಮಿಕಾ ಹೆಚ್.ವಿ ಗೆ 597ಅಂಕ :

ಹೊಸನಗರ ತಾಲ್ಲೂಕು ವರ್ತಕರ ಸಂಘದ ಖಜಾಂಚಿಯಾದ ವಾದಿರಾಜ್‌ರವರ ಪತ್ರಿಯಾದ ಭೂಮಿಕರವರು ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 597 ಅಂಕಗಳನ್ನು ಪಡೆದಿದ್ದಾರೆ.

ಇವರಿಗೆ ಕನ್ನಡದಲ್ಲಿ 125ಕ್ಕೆ 121 ಅಂಕ, ಇಂಗ್ಲೀಷ್ 100ಕ್ಕೆ 95 ಅಂಕ, ಹಿಂದಿಯಲ್ಲಿ 100ಕ್ಕೆ 97 ಅಂಕ, ಗಣಿತದಲ್ಲಿ 100ಕ್ಕೆ 98 ಅಂಕ, ವಿಜ್ಞಾನದಲ್ಲಿ 96ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 90ಅಂಕಗಳನ್ನು ಪಡೆದಿದ್ದಾರೆ. ಇವರು ರಾಮಕೃಷ್ಣ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here