ಏ.10 ರಿಂದ ಮೈಸೂರು-ತಾಳಗುಪ್ಪ ಮತ್ತೊಂದು ರೈಲು ಸಂಚಾರ | ಸಾರಿಗೆ ನೌಕರರ ಮುಷ್ಕರ ಹಿನ್ನಲೆ ತಾತ್ಕಾಲಿಕ ವಿಶೇಷ ರೈಲು ಸಂಚಾರ

0
8737

ಶಿವಮೊಗ್ಗ : ನೈಋತ್ಯ ರೈಲ್ವೆ ಮೈಸೂರು-ತಾಳಗುಪ್ಪ ನಡುವೆ ಮತ್ತೊಂದು ರೈಲನ್ನು ಓಡಿಸಲಿದೆ. ಏ. 10ರಿಂದ ಈ ರೈಲು ಸಂಚಾರ ಆರಂಭವಾಗಲಿದೆ.

ಏಪ್ರಿಲ್ 10ರಿಂದ ಕರ್ನಾಟಕದಲ್ಲಿ ವಿವಿಧ ಹೊಸ ರೈಲುಗಳನ್ನು ನೈಋತ್ಯ ರೈಲ್ವೆ ಆರಂಭಿಸುತ್ತಿದೆ.‌ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ ರೈಲುಗಳಿಗೆ ಮತ್ತೆ ಚಾಲನೆ ನೀಡಲಾಗುತ್ತಿದೆ.

ವೇಳಾಪಟ್ಟಿ:

ತಾಳಗುಪ್ಪ- ಮೈಸೂರು ರೈಲು ಮೈಸೂರಿನಿಂದ ಬೆಳಗ್ಗೆ 10.15ಕ್ಕೆ ಹೊರಡಲಿದ್ದು, ಸಂಜೆ 6 ಗಂಟೆಗೆ ತಾಳಗುಪ್ಪವನ್ನು ತಲುಪಲಿದೆ. 12.25ಕ್ಕೆ ಹಾಸನ, 1.20ಕ್ಕೆ ಅರಸೀಕೆರೆ, 2.40ಕ್ಕೆ ತರೀಕೆರೆ, 3 ಗಂಟೆಗೆ ಭದ್ರಾವತಿ, 3.30ಕ್ಕೆ ಶಿವಮೊಗ್ಗ ತಲುಪಲಿದೆ. 3.35ಕ್ಕೆ ಶಿವಮೊಗ್ಗದಿಂದ ಹೊರಟು 6 ಗಂಟೆಗೆ ತಾಳಗುಪ್ಪ ತಲುಪಲಿದೆ. ಬೆಳಗ್ಗೆ 8.45ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು, 10.55ಕ್ಕೆ ಶಿವಮೊಗ್ಗ ತಲುಪಲಿದೆ. 11.10ಕ್ಕೆ ನಗರದಿಂದ ಹೊರಡುವ ರೈಲು 4.50ಕ್ಕೆ ಮೈಸೂರು ತಲುಪಲಿದೆ.

ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ:

ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ನೌಕರರು ಮುಷ್ಕರ ಕೈಗೊಂಡಿರುವುದರಿಂದ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ವಿಶೇಷ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸಲಿದೆ.

ಶನಿವಾರದಿಂದ ವಾರಾಂತ್ಯ ರಜೆ ಜೊತೆಗೆ ಏ.13 ರಂದು ಯುಗಾದಿ ಹಬ್ಬ ಇರುವುದರಿಂದ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಸರ್ಕಾರಿ ಬಸ್‌ಗಳಿಲ್ಲದೆ ಸಮಸ್ಯೆಯಾಗಿರುವುದರಿಂದ ವಿಶೇಷ ರೈಲು ಬಿಡಲಾಗಿದೆ.ಬೆಂಗಳೂರು ಯಶವಂತಪುರದಿಂದ ಏ.9 ರಂದು ರಾತ್ರಿ 11.45ಕ್ಕೆ ಹೊರಡಲಿರುವ ರೈಲು ತುಮಕೂರು, ತಿಪಟೂರು, ಅರಸಿಕೆರೆ, ಕಡೂರು, ಬೀರೂರು, ತರೀಕೆರೆ ಭದ್ರಾವತಿ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 3.30ಕ್ಕೆ ಯಶವಂತಪುರ, ಸಂಜೆ 4.15ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಲಿದೆ. ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಬೇಕಿದ್ದು, ಯುಗಾದಿ ಮತ್ತು ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಈ ವಿಶೇಷ ರೈಲು ಸಂಚರಿಸಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here