ಏ.5 ರಂದು ಹೊಸನಗರದಲ್ಲಿ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಸರಳವಾಗಿ ಆಚರಿಸಲು ನಿರ್ಧಾರ

0
315

ಹೊಸನಗರ : ಏ. 5ರ ಸೋಮವಾರ ಬೆಳಗ್ಗೆ 10 ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ಮಾಜಿ ಉಪ ಪ್ರಧಾನಿಗಳು, ಹಸಿರು ಕ್ರಾಂತಿ ಹರಿಕಾರರು ಆದ ಡಾ‌. ಬಾಬು ಜಗಜೀವನ್ ರಾಮ್ ರವರ ಹುಟ್ಟುಹಬ್ಬವನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಗುವುದು ಎಂದು ತಹಶಿಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ವಿ.ಎಸ್ ರಾಜೀವ್ ರವರು ತಿಳಿಸಿದ್ದಾರೆ.

ಎರಡನೇ ಹಂತದ ಕೋವಿಡ್-19 ಸೋಂಕು ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕ್ರಮ ಅನುಸರಿಸ ಬೇಕಾಗಿರುವುದರಿಂದ ಸಾಂಕೇತಿಕವಾಗಿ ಮಹಾನುಭಾವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುವ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು.

ಅಂದು ತಾಲೂಕಿನ ಎಲ್ಲಾ ಇಲಾಖಾ ಮಟ್ಟದ ಅಧಿಕಾರಿಗಳು ತಾವೇ ಖುದ್ದಾಗಿ ಸಹಾಯಕರನ್ನು ಕಳಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಸೂಚಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here