ಐತಿಹಾಸಿಕ ಚಂದ್ರಗುತ್ತಿಯ ಶ್ರೀ ರೇಣುಕಾಂಬ ಸನ್ನಿಧಿಯಲ್ಲಿ ಸರಳ ನವರಾತ್ರಿ ಉತ್ಸವ

0
707

ಸೊರಬ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ನವರಾತ್ರಿ ಪೂಜೆ ಅ.7 ರಿಂದ 16 ರವರೆಗೆ ಸರಳವಾಗಿ ಜರುಗಲಿದೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿ ಅನ್ವಯ ನವರಾತ್ರಿ ಪೂಜೆ ನೆರವೇರಿಸಲಾಗುತ್ತಿದೆ. ಅ.7 ರಂದು ದೇವಿಯ ಘಟ ಸ್ಥಾಪನೆ, 10 ರಂದು ಲಲಿತಾ ಪಂಚಮಿ, 12 ರಂದು ಶಾರದಾ ಪೂಜೆ, 13 ರಂದು ಜಲದುರ್ಗಾ ಪೂಜೆ, 14 ರಂದು ಚಂಡಿ ಹವನ ಮತ್ತು ಘಟ ವಿಸರ್ಜನೆ, 15 ರಂದು ಸರಳವಾಗಿ ಬನ್ನಿ‌ ಪೂಜೆ, 16 ರಂದು ತುಲಾಭಾರ ಹರಕೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಿತ್ಯ ಧಾರ್ಮಿಕ ಪಠಣ ಹಾಗೂ ಪೂಜಾ ವಿಧಿ ವಿಧಾನಗಳು ಜರುಗಲಿವೆ ಎಂದು ದೇವಸ್ಥಾನದ ಅರ್ಚಕ ಡಿ. ಅರವಿಂದ್ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here