ಒಂದೇ ದಿನ ಬರೋಬ್ಬರಿ 422 ಮಂದಿಗೆ ತಗುಲಿದ ಮಹಾಮಾರಿ ಕೊರೊನಾ ! ಇಂದು ಮತ್ತೊಂದು ಬಲಿ !!

0
448

ಶಿವಮೊಗ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಕೊರೊನಾ 3ನೇ ಅಲೆ ಜಿಲ್ಲೆಯಲ್ಲಿ ಇಂದು 2ನೇ ಬಲಿ ಪಡೆದಿದೆ.

ಇಂದು ಜಿಲ್ಲೆಯಲ್ಲಿ ಬರೋಬ್ಬರಿ 422 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1688 ಕ್ಕೇರಿದೆ.

ತಾಲೂಕುವಾರು ಇಂದಿನ ಸೋಂಕಿತರ ವಿವರ :

ಶಿವಮೊಗ್ಗ 125

ಭದ್ರಾವತಿ 157

ತೀರ್ಥಹಳ್ಳಿ 08

ಶಿಕಾರಿಪುರ 19

ಸಾಗರ 29

ಹೊಸನಗರ 47

ಸೊರಬ 30

ಇತರೆ ಜಿಲ್ಲೆ 07

ಇಂದು 2514 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 2676 ಜನರಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿದೆ. 345 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 25 ಜನರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ 34 ಮಂದಿ, 1594 ಜನರು ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. 13 ಮಂದಿ ಟ್ರಿಯಾಜ್ ಸೆಂಟರ್‌ಗಳಲಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 1074 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here