ಒಂದೇ ದಿನ 7 ಕಡೆ ಕಳವು ಮಾಡಿದ್ದ ಮೂವರು ಖದೀಮರು ಅಂದರ್ !

0
693

ಶಿವಮೊಗ್ಗ : ದೀಪಾವಳಿ ಹಬ್ಬದ ಒಂದೇ ದಿನ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ 7 ಕಡೆ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕೋಟೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಆಯನೂರು ಗೇಟ್ ನಿವಾಸಿ ಗಗನ್‌ (19), ಶಿವಮೊಗ್ಗ ಬೊಮ್ಮನಕಟ್ಟೆಯ ಎಫ್ ಬ್ಲಾಕ್ ನಿವಾಸಿ ವಿಶಾಲ್‌ (19) ಮತ್ತು ಬೊಮ್ಮನಕಟ್ಟೆಯ ಬಿ ಬ್ಲಾಕ್ ನಿವಾಸಿ ಪ್ರೀತಮ್ (19) ಬಂಧಿತ ಆರೋಪಿಗಳು.

ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನ.2ರಂದು ಬೈಕ್‌ವೊಂದನ್ನು ಕಳವು ಮಾಡಿದ್ದ ಆರೋಪಿಗಳು ನ.5ರ ಬೆಳಗಿನ ಜಾವ ಶಿವಮೊಗ್ಗ ನಗರದ 4 ಕಡೆ, ಭದ್ರಾವತಿ ನಗರದ ಮೂರು ಕಡೆಗಳಲ್ಲಿ ಮನೆಗಳ ಕಳವು ಮಾಡಿದ್ದರು. ವಿಳಾಸ ಹಾಗೂ ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ಚಾಕು ತೋರಿಸಿ ಬೆದರಿಸಿ, ಜನರಿಂದ ನಗದು, ಮೊಬೈಲ್ ಫೋನ್ ಹಾಗೂ ಬಂಗಾರದ ಸರ ಸುಲಿಗೆ ಮಾಡಿದ್ದರು.

ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು, ತುಂಗಾನಗರ ಪೊಲೀಸ್ ಠಾಣೆಯಲ್ಲಿ 01, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 01 ಹಾಗೂ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು ಸೇರಿದಂತೆ ಒಟ್ಟು 07 ಪ್ರಕರಣಗಳು ದಾಖಲಾಗಿದ್ದವು.

ಬಂಧಿತರಿಂದ ಬಜಾಜ್ ಪಲ್ಸರ್ ಬೈಕ್, 10 ಮೊಬೈಲ್ ಫೋನ್‌ಗಳು, 01 ವ್ಯಾನಿಟಿ ಬ್ಯಾಗ್ ಮತ್ತು ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬೆಳ್ಳಿಯ ಸರವನ್ನು ವಶಕ್ಕೆ ಪಡೆಯಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here