ಓಡುವ ನೀರನ್ನು ನಡೆಸಿ, ಸಡೆಯುವ ನೀರನ್ನು ನಿಲ್ಲಿಸಿ ಅಂತರ್ಜಾಲ ಹೆಚ್ಚಿಸಿ: ಜೀವಜಲ ಜಾಗೃತಿ ಕಾರ್ಯಾಗಾರ

0
350

ಶಿವಮೊಗ್ಗ: ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಘಟಕ ಹಾಗೂ ರೋಟರಿ ಸಂಸ್ಥೆ, ಶಿವಮೊಗ್ಗ, ಉತ್ತರ ಸಹಯೋಗದೊಂದಿಗೆ ಮಾರ್ಚ್, 12, 2021 ರಂದು ಮಹಾವಿದ್ಯಾಲಯದ ಆವರಣದಲ್ಲಿ ಜಲ ಮಾಸಾಚರಣೆ ಅಂಗವಾಗಿ “ಜೀವಜಲ”ದ ಮಹತ್ವದ ಕುರಿತು ಜಾಗೃತಿ ಮೂಡಿಸಲು “ಕಾರ್ಯಾಗಾರ”ವನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು 70ಕ್ಕೂ ಹೆಚ್ಚು ಎನ್ಎಸ್ಎಸ್‌ ಸ್ವಯಂ ಸೇವಕರು, ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಯಂಸೇವಕ ತಂಡದ ವಿದ್ಯಾರ್ಥಿಗಳಾದ ಖುಷಿ, ಮನೋಜ್ ಹಾಗೂ ಚಿನ್ಮಯ್ ಇವರುಗಳು ಕ್ಯಾಂಪಸ್ಸಿನ ಜಲ-ಸರ್ವೆಕ್ಷಣೆ ಮಾಡಿ, ತಮ್ಮ ವಿಚಾರಗಳನ್ನು ಮಂಡಿಸಿದರು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ, ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಭಾರಿ ಡೀನ್‍ರವರಾದ ಪ್ರೊಫೆಸರ್ (ಡಾ.) ಗಣೇಶ ಉಡುಪರವರು ಈಗಿನ ಪರಿಸ್ಥಿತಿಯ ಕುರಿತು ಸಾಮಾಜಿಕ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಮಹಾವಿದ್ಯಾಲಯದಲ್ಲಿ ಅಗತ್ಯ ಎಂದು ಹಾಗೂ ನೀರಿನ ಸಂರಕ್ಷಣೆಗೆ ಮುನ್ನುಡಿಯಾಗಲೆಂದು ಆಶಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಯಾದ ರೋಟೆರಿಯನ್ (ಪ್ರೊ.) ಚಂದ್ರಶೇಖರ್ ರವರು ಜಲಾನಯನ ಪ್ರದೇಶದ ಅಭಿವೃದ್ಧಿ ಪ್ರಾಮುಖ್ಯತೆ ಹಾಗೂ ಜನರಲ್ಲಿ ಅರಿವು ಮೂಡಿಸುವುದರ ಬಗ್ಗೆ ಮಾತನಾಡಿದರು. “ಓಡುವ ನೀರನ್ನು ನಡೆಸಿ ಸಡೆಯುವ ನೀರನ್ನು ನಿಲ್ಲಿಸಿ ಅಂತರ್ಜಾಲ ಹೆಚ್ಚಿಸಿ” ಎಂದರು. ಸಂಪನ್ಮೂಲ ವ್ಯಕ್ತಿಯಾದ ಶ್ರೀ ಉಮೇಶ್ ರವರು ನೀರಿನ ಸಮರ್ಪಕ ಬಳಕೆ ಹಾಗೂ ಅದರಲ್ಲಿ ಮಳೆಕೊಯ್ಲಿನ ಉಪಯೋಗದ ಬಗ್ಗೆ ತಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೆ ತಿಳಿಸಬೇಕೆಂದು ಕರೆಕೊಟ್ಟರು. ಕ್ಯಾಂಪಸ್ಸಿನ ಜಲ-ಸರ್ವೆಕ್ಷಣೆ ಕೈಗೊಂಡು ಜಲಆಯವ್ಯಯ ಮಂಡಿಸಿದ ಎನ್. ಎಸ್. ಎಸ್. ಸ್ವಯಂ ಸೇವಕರ ಕಾರ್ಯಗಳನ್ನು ಶ್ಲಾಘಿಸಿದರು.

ನೀರಿನ ಮಿತವ್ಯಯ ಹಾಗೂ ಸೋರಿಕೆ ತಡೆಗಟ್ಟುವ ಅಗತ್ಯತೆ ಬಗ್ಗೆ ತಿಳಿ ಹೇಳಿದರು. ಸದರಿ ಕಾರ್ಯಾಗಾರವನ್ನು ಆಯೋಜಿಸಿದ, ರಾಷ್ಟ್ರೀಯ ಸೇವಾಯೋಜನಾ ಅಧಿಕಾರಿಗಳಾದ ಡಾ. ಎಮ್. ಧೂಳಪ್ಪ ಎಂ. ಹಾಗೂ ಡಾ. ಎಮ್.ಎಮ್. ವೆಂಕಟೇಶ್ ಹಾಗೂ ಆಸ್ತಿ ವಿಭಾಗದ ಕಿರಿಯ ಅಭಿಯಂತರು ಪವನ, ಮತ್ತಿತರರು ಉಪಸ್ಥಿತರಿದ್ದರು ವಿದ್ಯಾರ್ಥಿ ರಕ್ಷಿತ್ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಸ್ವಾಗತಿಸಿದರೆ ಖೇಮರಾಜ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here