ಕಡಗಲುನಾಡು ಮಳಲೂರಮ್ಮ ಓಕುಳಿ ಪೂಜಾ ಕಾರ್ಯಕ್ರಮ

0
131

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲಂದೂರಿನ ಕಡಗಲುನಾಡು ಮಳಲೂರಮ್ಮ ದೇವರ ರಥೋತ್ಸವ ಕೊನೆಯ ದಿನವಾದ ಇಂದು ಓಕುಳಿ ಪೂಜಾ ಕಾರ್ಯಕ್ರಮ ಸಾವಿರಾರು ಭಕ್ತರೊಂದಿಗೆ ವಿಭೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಮಳಲೂರಮ್ಮ, ದೊಡ್ಡಮ್ಮ, ಚಿಕ್ಕಮ್ಮ, ವೀರಭದ್ರೇಶ್ವರ ಹಾಗೂ ಬರ್ತಾಳಮ್ಮ ದೇವರಿಗೆ ವಿಶೇಷ ಪೂಜೆ, ಅಲಂಕಾರ ನಡೆಸಲಾಗಿತ್ತು. ನಂತರ ದೇವರನ್ನು ಅಡ್ಡೆಯಲ್ಲಿ ಕುಳ್ಳಿರಿಸಿ ಗ್ರಾಮಸ್ಥರು ದೇವಾಲಯದ ಸುತ್ತಮುತ್ತ ಮೆರವಣಿಗೆ ನಡೆಸುವ ಮೂಲಕ ಸೇವೆ ಸಲ್ಲಿಸಿದರು.

ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಏಳೂರು ಹಾಗೂ ಹದಿನಾರು ಹಳ್ಳಿ ಗ್ರಾಮಸ್ಥರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸುವ ದೇವರ ದರ್ಶನ ಪಡೆದುಕೊಂಡರು.

ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಲು ಆಗಮಿಸಿದ ಭಕ್ತಾಧಿಗಳಿಗೆ ಹಾಗೂ ಕಡಗಲು ನಾಡು ಗ್ರಾಮಸ್ಥರಿಗೆ ದೇವಾಲಯ ಸಮಿತಿ ಕಾರ್ಯದರ್ಶಿ ಎನ್. ಆರ್. ರಾಜಣ್ಣಗೌಡ ಕೃತಜ್ಞತೆ ಸಲ್ಲಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here