ಕಡಬಗೆರೆ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

0
608

ಚಿಕ್ಕಮಗಳೂರು: ಕಣ್ಣುಗಳು ಮನುಷ್ಯನಿಗೆ ಮುಖ್ಯವಾದದ್ದು ಎಂದು ಡಾ. ಪ್ರಶಾಂತ್ ಸುರಕ್ಷಾ ಕ್ಲಿನಿಕ್ ಕಡಬಗೆರೆ ಇವರು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ನೇಹಜೀವಿ ಬಂಧುಗಳು ತಂಡದ ವತಿಯಿಂದ ತಾಲೂಕಿನ ಖಾಂಡ್ಯ ಹೋಬಳಿಯ ಕಡಬಗೆರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ನೇರವೆರಿಸಿ ಮಾತನಾಡಿದ ಅವರು, ಇಂತಹ ಜನಪರ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ವಿಠಲ್ ಪೂಜಾರಿ, ಮೂಡಿಗೆರೆ, ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಜಯ್ವಂತ್ ಪಟಗಾರ್ ಮಾತನಾಡಿ, ಖಾಂಡ್ಯದ ವಿಪತ್ತು ನಿರ್ವಹಣಾ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

300 ಕ್ಕೂ ಹೆಚ್ಚು ಮಂದಿಗೆ ನೇತ್ರಾ, ದಂತ ಮತ್ತು ರಕ್ತ ತಪಾಸಣೆ ಮಾಡಲಾಯಿತು. 12 ಮಂದಿಗೆ ನೇತ್ರಾ ಪೊರೆ ಆಪರೇಷನ್ ಗೆ ಪ್ರಸಾದ್ ನೇತ್ರಾಲಯ ಉಡುಪಿಗೆ ಕಳುಹಿಸಿಕೊಡಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಜೇನುಗದ್ದೇ ಇಲ್ಲಿನ ವೈದ್ಯಾಧಿಕಾರಿಗಳಿಂದ ಬಿಪಿ, ಶುಗರ್ ತಪಾಸಣೆ ನಡೆಸಲಾಯಿತು.

ಪ್ರಸಾದ್ ನೇತ್ರಾಲಯದ ಡಾ. ಮೈತ್ರಿ, ಇವರ ತಂಡ ಶಿವಮೊಗ್ಗದ ರೋಟರಿ ರಕ್ತ ನಿಧಿಯ ಸೂಪರ್ ವೈಸರ್ ನಟರಾಜ್, ಇವರ ತಂಡ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು ಶಿವಮೊಗ್ಗ ಇಲ್ಲಿನ ವೈದರಾದ ಡಾ. ಇಕ್ಬಾಲ್, ಡಾ. ಭಕ್ತಿ, ಡಾ. ಸುಝನ್ ಇವರ ತಂಡ ಖಾಂಡ್ಯ ವಲಯದ ಮೇಲ್ವಿಚಾರಕರಾದ ಶಿವರಾಜ್ ಖಾಂಡ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಚಂದ್ರಶೇಖರ್ ರೈ, ರಘುಪತಿ ವಿ ಸಿ ಬಿದರೆ, ಪಲ್ಲವಿ, ಮಲ್ಲಿಕ, ಕೃಷ್ಣ, ಚಂದ್ರಹಾಸ್, ಚಿನ್ಮಯಿ, ರಹೀಮ್, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಸೇವಾ ಪ್ರತಿನಿಧಿಗಳು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here