ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಬೈಕ್ ಸುಟ್ಟ ದುಷ್ಕರ್ಮಿಗಳು!

0
1202

ಶಿವಮೊಗ್ಗ : ತಾಲೂಕಿನ ಯರೇಕೊಪ್ಪ ಗ್ರಾಮದ ಸಮೀಪ ವ್ಯಕ್ತಿಯೊಬ್ಬರ ಮೇಲೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಸ್ಥಳದಲ್ಲೇ ಬೈಕ್ ಸುಟ್ಟಿರುವ ಘಟನೆ ನಡೆದಿದೆ.

ಹಾರನಹಳ್ಳಿಯ ರಫಿ ಉಲ್ಲಾ (37) ಎಂಬುವರು ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ಹಲ್ಲೆ ಮಾಡಿ, ಬೈಕ್ ಅನ್ನು ಸುಟ್ಟು ಭಸ್ಮ ಮಾಡಿದ್ದಾರೆ‌.

ತರಕಾರಿ ವ್ಯಾಪಾರ, ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ರಫಿ ಉಲ್ಲಾ ಅವರು ಹಾರನಹಳ್ಳಿಯಿಂದ ಶಿವಮೊಗ್ಗಕ್ಕೆ ಬಜಾಜ್ ಪ್ಲಾಟಿನ ವಾಹನದಲ್ಲಿ ಬರುವಾಗ ಯರೇಕೊಪ್ಪದ ಅರಣ್ಯ ಇಲಾಖೆಯ ಪ್ರವೇಶ‌ದ್ವಾರದ ಬಳಿ ಮೂವರು ದುಷ್ಕರ್ಮಿಗಳ ತಂಡವೊಂದು ಅವರ ಕಣ್ಣಿಗೆ ಖಾರದ ಪುಡಿ ಎರಚಿ ದಾಳಿ ನಡೆಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ರಫಿಕುಲ್ಲಾ ಅವರ ಪತ್ನಿ ರಿಹಾನಾ ಭಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೂಲಕ ಅವರ 13 ವರ್ಷದ ದಾಂಪತ್ಯ ಜೀವನ ದಾರುಣ್ಯ ಅಂತ್ಯ ಕಂಡಿತ್ತು. ಇದಕ್ಕೆ ಅವರ ಸಹೋದರನೇ ನೇರ ಕಾರಣವೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ರಫಿ ಉಲ್ಲಾ ಗಂಭೀರವಾಗಿ ಆರೋಪಿಸಿದ್ದಾರೆ.

ಪತ್ನಿಯ ಸಾವಿನ ನಂತರ ತನ್ನ ನಾಲ್ಕು ಜನ ಮಕ್ಕಳನ್ನೂ ರಫಿಕುಲ್ಲಾ ಸಾಕುತ್ತಿದ್ದು, ಗ್ರಾಮದಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಅವರ ದೊಡ್ಡಪ್ಪನ ಮಗನ ಹೇಳಿಕೆ ಪ್ರಕಾರ ನಿನ್ನೆ ಹಾರನಹಳ್ಳಿ ಪ್ರಾರ್ಥನಾ ಮಂದಿರದಲ್ಲಿ ಹಣದ ವಿಷಯವನ್ನ ಸರಿಪಡಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ದಾಳಿ ಮಾಡಿದ್ದಾರೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ನಿವಾಸಿಗಳಾದ ಸಾದಿಕ್ ಪಾಷಾ, ಇಲ್ಲು ಮತ್ತು ದಸ್ತು ಈ ದಾಳಿ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ರಫಿ ಉಲ್ಲಾ ಆರೋಪಿಸಿದ್ದಾರೆ. ಕಾರಿನಲ್ಲಿ ಹಿಂಬಾಲಿಸಿಕೊಂಡು ಐವರು ಬಂದಿದ್ದಾರೆ. ಇವರೆಲ್ಲಾ ಆತ್ಮಹತ್ಯೆ ಮಾಡಿಕೊಂಡಿರುವ ರಿಹಾನ ಬಾನು ಅವರ ಕಡೆಯವರು ಎಂಬುದು ಅವರ ಹೇಳಿಕೆ ಆಗಿದೆ.

ಗಾಯಗೊಂಡ ರಫಿ ಉಲ್ಲಾರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here