ಎನ್.ಆರ್. ಪುರ: ಬಾಳೆಹೊನ್ನೂರು ಸಮೀಪದ ಬಿಕ್ಕರಣೆ-ಮಾಗುಂಡಿ ರಸ್ತೆಯ ಬದಿಯಲ್ಲಿದ್ದ ಜಾನುವಾರುಗಳನ್ನು ಕಳವು ಮಾಡಿ ವಾಹನದಲ್ಲಿ ತುಂಬಿಕೊಂಡು ಮಾಗುಂಡಿ ಕಡೆಗೆ ಹೋಗುವಾಗ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಸೀನಶೆಟ್ಟಿ ವಾಸದ ಮನೆಯ ಹತ್ತಿರ ನಡೆದಿದೆ.
ರಸ್ತೆ ಬದಿಯಲ್ಲಿ ಪಿಕಪ್ ವಾಹನವು ರಸ್ತೆ ಬದಿಯಲ್ಲಿ ಪಲ್ಟಿಯಾಗಿದ್ದು ವಾಹನದ ಪಕ್ಕದಲ್ಲಿ ಇದ್ದ ಮೂರು ಜಾನುವಾರುಗಳು ವಶಪಡಿಸಿಕೊಂಡು ಮಾಗುಂಡಿಯ ಚಾಲಕ ಜಬ್ಬರ್, ಚಾಲಕ ವೃತ್ತಿ, ವಾಸ ಮಾಗುಂಡಿ, ಬಿಕ್ಕರಣೆ ಕುಂಬಾರಶೆಟ್ಟಿ ವಾಸಿ ಶಿವಣ್ಣರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಕ್ಕರಣೆ ಗ್ರಾಮದಲ್ಲಿನ ರಸ್ತೆ ಬದಿ ಮಲಗಿದ್ದ ಜಾನುವಾರುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ.
ತಮ್ಮ ವಾಹವನ್ನು ಕೆಲವರು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಗಾಬರಿಯಿಂದ ವೇಗವಾಗಿ ವಾಹನ ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಮೂರು ಜಾನುವಾರುಗಳಿದ ಅಂದಾಜು ಬೆಲೆ 30.000 ರೂಪಾಯಿ ಆಗಲಿದ್ದು, ಬಾಳೆಹೊನ್ನುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.