24.3 C
Shimoga
Friday, December 9, 2022

ಕನಕದಾಸ ಹಾಗೂ ಒನಕೆ ಓಬವ್ವ ಅವರ ಆದರ್ಶಗಳು ಇಂದಿಗೂ ಪ್ರಸ್ತುತ ; ಬಿಇಓ ಕೃಷ್ಣಮೂರ್ತಿ


ಹೊಸನಗರ: ಕರ್ನಾಟಕ ದಾಸ ಪರಂಪರೆಯಲ್ಲಿ ಕನಕದಾಸರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಭಗವಂತನನ್ನು ಸೇರಲು ಭಕ್ತಿ ಮಾರ್ಗವೇ ಶ್ರೇಷ್ಠ ಎಂದು ಸಾರಿ, ತಮ್ಮ ದಾಸಸಾಹಿತ್ಯದ ಮೂಲಕ ಸಾಮಾಜಿಕ ಪೀಡುಗಾಗಿದ್ದ ಜಾತೀಯತೆ ಹೋಗಲಾಡಿಸಲು ಶ್ರಮಿಸಿದ ಅವರು ಮಹಾನ್ ದಾಸಶ್ರೇಷ್ಠರಲ್ಲಿ ಒಬ್ಬರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.


ಕನಕದಾಸ ಹಾಗೂ ಓಬವ್ವ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.


ಒಬವ್ವ ಸಹ ಝನ್ಸಿ ರಾಣಿ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿಗೆ ಸೇರುವವಳು. ತನ್ನ ಕೆಚ್ಚದೆಯ ಹೋರಾಟದ ಮೂಲಕ ನಾಡನ್ನು ವಿರೋಧಿಗಳಿಂದ ರಕ್ಷಿಸಲು ಶ್ರಮಿಸಿ ಪ್ರಾಣತ್ತೆತ್ತವಳು. ಕನಕ ಹಾಗೂ ಓಬವ್ವರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಸಮೂಹಕ್ಕೆ ಮಾದರಿಯಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಪ.ಪಂ.ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯ ಯಾಶೀರ್, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಎಫ್‌ಡಿಸಿ ವಿನಯ ಎಂ. ಆರಾಧ್ಯ, ಆಹಾರ ಇಲಾಖೆಯ ನಾಗರಾಜ್, ಜಿ.ಪಂ. ವಿಭಾಗದ ಯೋಗೇಂದ್ರ, ಶಿವಪ್ಪ, ನಾಗರಾಜ್ ಕಿಣಿ, ತಾಲೂಕು ಕನಕದಾಸ ಸಂಘದ ಅಧ್ಯಕ್ಷ ರಘುವೀರ್, ತಿಪ್ಪೇಶ್, ನಾಗರಾಜ್, ಬಸವರಾಜ್, ಮಂಜುನಾಥ್, ಶಿವರಾಜ್, ಮನತೇಶ್, ಚಂದ್ರಪ್ಪ, ನಾಗೇಂದ್ರ, ನಾಗರತ್ನ ಮೊದಲಾದವರು ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!