24.3 C
Shimoga
Friday, December 9, 2022

ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮೊದಲು ಮನೆಯಿಂದ ಆಗಲಿ

ರಿಪ್ಪನ್‌ಪೇಟೆ: ಕನ್ನಡ ಭಾಷೆ ಮಾತನಾಡುವುದರೊಂದಿಗೆ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮೊದಲು ಮನೆಯಿಂದ ಆಗಲಿ. ಕನ್ನಡ ನೆಲ-ಜಲ ನುಡಿ ಭಾಷೆಯು ಕನ್ನಡನಾಡಿನ ಹೆಮ್ಮೆಯೆಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಕರೆ ನೀಡಿದರು.


ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ 29ನೇ ವರ್ಷದ ಕಲಾಕೌಸ್ತುಭ ಕನ್ನಡ ಸಂಘದ ವಾರ್ಷಿಕೋತ್ಸವ ಮತ್ತು ಡಾ.ಪುನಿತ್‌ ರಾಜ್‍ಕುಮಾರ್ ಸ್ಮರಣೋತ್ಸವ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾಷೆಯ ಇತಿಹಾಸದ ಅಧ್ಯಯನ ನಡೆಸಿ ಅದರ ತಾಯಿ ಬೇರು ಕನ್ನಡವಾಗಿದೆ. ಕನ್ನಡ ನರನಾಡಿಯಲ್ಲಿದೆ. ಕರುನಾಡು ಈ ನಾಡು ಕರ್ನಾಟಕ ಎಂದಾಗಿದ್ದು ಕನ್ನಡ ರಾಜ್ಯೋತ್ಸವ ತಿಂಗಳ ಕಾರ್ಯಕ್ರಮವಾಗದೇ ವರ್ಷದ ಆಚರಣೆಯಾಗುವಂತಾಲಿ. ಮನುಷ್ಯನ ದೇವದ ಅಂಗಾಂಗಗಳಲ್ಲಿ ಕನ್ನಡವೇ ತುಂಬಿದೆ ಎಂದು ಭಾಷೆಯ ಕುರಿತು ಬಣ್ಣಿಸಿದರು.


ಇಂದಿನ ದಿನಗಳಲ್ಲಿ ನಶಿಸುತ್ತಿರುವ ಎತ್ತಿನ ಬಂಡಿಯೊಂದಿಗೆ ಕನ್ನಡವನ್ನು ಉಳಿಸಿ ಬೆಳಸುವ ಜನಜಾಗೃತಿ ಕಾರ್ಯ ಮುಂದಿನ ಯುವಪೀಳಿಗೆಗೆ ಮಾರ್ಗದರ್ಶನವಾಗುವಂತಾಗಲಿ ಎಂದು ಅಶಿಸಿದರು.


67ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೌಸ್ತೂಭ ಕನ್ನಡ ಸಂಘದ ಅಧ್ಯಕ್ಷ ಆರ್.ವಿ.ನಿರೂಪ್ ಕುಮಾರ್ ವಹಿಸಿದ್ದರು.


ಕನ್ನಡ ಧ್ವಜಾರೋಹಣವನ್ನು ರಾಮಚಂದ್ರ (ಗ್ಯಾರೇಜ್ ರಾಮು) ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಮಹಾಲಕ್ಷ್ಮಿ, ವಿನೋಧ, ವನಮಾಲ, ಸುಧೀಂದ್ರ ಪೂಜಾರಿ, ಆಶೀಫ್, ಗಣಪತಿ, ಧನಲಕ್ಷ್ಮಿ, ದಾನಮ್ಮ, ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ಜಿ.ಡಿ.ಮಲ್ಲಿಕಾರ್ಜುನ, ಸರಾಭೀ ಹೈದರ್, ನಿರುಪಮಾ ರಾಕೇಶ್, ಸುಂದರೇಶ್, ಪಾಕಾಶ್‌ಪಾಲೇಕರ್, ಆಸಿಫ್ ಭಾಷಾ, ಗಣಪತಿ ಗವಟೂರು, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎನ್.ಚಂದ್ರೇಶ್, ಆರ್.ಟಿ.ಗೋಪಾಲ, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪಿ.ರಮೇಶ್, ಕೃಷ್ಣೋಜಿರಾವ್, ಜೆಡಿಎಸ್ ತಾಲ್ಲೂಕ್ ಅಧ್ಯಕ್ಷ ಎನ್.ವರ್ತೇಶ್, ಮಂಜಪ್ಪ, ಶ್ವೇತಾ, ಶೈಲಾ ಆರ್.ಪ್ರಭು, ಗೀತಾ, ಸೀತಾ, ಗೀತಾ ಅಣ್ಣಪ್ಪ, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಅಶ್ವಿನಿ, ಹಿರಿಯಣ್ಣಭಂಡಾರಿ, ಸೀತಮ್ಮ, ಸತೀಶ್‌ಶೆಟ್ಟಿ, ಜಗದೀಶ್, ಗಣೇಶ್ ಎ.ಆರ್,ಕೆ. ಅರುಣ್ ಕಾಳಮುಖಿ ಇನ್ನಿತರ ಹೆಚ್.ಸಿ.ಪರಶುರಾಮ ಹಲವರು ಹಾಜರಿದ್ದರು.


ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಪದ್ಮಾಸುರೇಶ್ ಸ್ವಾಗತಿಸಿದರು. ಲೀಲಾ ಶಂಕರ್ ನಿರೂಪಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!