ಕನ್ಹಯ್ಯ ಲಾಲ್ ಬರ್ಬರ‌ ಹತ್ಯೆ ಖಂಡಿಸಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಕೇಂದ್ರ ಗೃಹ ಸಚಿವರಿಗೆ ಮನವಿ

0
147

ಶಿಕಾರಿಪುರ : ರಾಜಸ್ಥಾನದ ಕಾಂಗ್ರೆಸ್ ಆಡಳಿತದ ಮುಸಲ್ಮಾನ್ ಓಲೈಕೆಯ ಫಲವಾಗಿ ಮತಾಂಧ ಶಕ್ತಿಗಳು ಹಿಂದೂಗಳನ್ನು ನಾಮವಶೇಷ ಮಾಡುವ ಕೃತ್ಯವು ಮುಂದುವರೆದಿದ್ದು ಮೊನ್ನೆ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಎಂಬ ಹಿಂದೂ ಟೈಲರ್ ನನ್ನು ಇಸ್ಲಾಮಿಕ್ ಜಿಹಾದಿಗಳು ಹಾಡುಹಗಲೇ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಕೇಂದ್ರ ಗೃಹ ಸಚಿವರಿಗೆ ಶಿಕಾರಿಪುರ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಸಂಘಟಕರು ಮಾತನಾಡಿ, ಇದು ಹಿಂದೂಗಳ ಅಸ್ತಿತ್ವದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದ್ದು, ಹಿಂದೂಗಳನ್ನು ಮತ್ತು ಪ್ರಧಾನಮಂತ್ರಿಯವರನ್ನು ಸಹ ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಹೇಳಿರುವುದು ಅತ್ಯಂತ ಭಯಾನಕ ಘಟನೆಯಾಗಿದೆ. ಏಪ್ರಿಲ್ 3 ರಂದು ರಾಜಸ್ಥಾನದ ಕರೋಳಿ ಎಂಬಲ್ಲಿ ಹೊಸವರ್ಷದ ಮೆರವಣಿಗೆಯ ಮೇಲೆ ಮತಾಂಧರು ಆಕ್ರಮಣ ಮಾಡಿದರು. 50 ಹಿಂದೂಗಳ ವಾಹನ, ಅಂಗಡಿಯನ್ನು ಸುಟ್ಟು ಹಾಕಿದರಲ್ಲದೇ, ಈ ಘಟನೆಯಿಂದ 50 ಕ್ಕೂ ಅಧಿಕ ಜನರು ಗಾಯಗೊಂಡರು. ಈ ಘಟನೆಯ ನಂತರ ಅನೇಕ ಹಿಂದೂಗಳು ಅಲ್ಲಿಂದ ಜೀವಭಯದಿಂದ ಪಲಾಯನವಾಗಬೇಕಾಯಿತು.

ಮೇ 22 ರಂದು ರಾಜಸ್ಥಾನದ ಜೋದಪುರದಲ್ಲಿ ದಲಿತ ಹಿಂದೂ ಕುಟುಂಬದ ಮೇಲೆ ರೋಹಿಂಗ್ಯಾ ಮತಾಂಧರು ಆಕ್ರಮಣ ಮಾಡಿದರು. ಮೇ 12 ರಂದು ಅದೇ ರಾಜಸ್ಥಾನದ ಹನುಮಂಗರ್‌ದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶ್ರೀ. ಸತ್ವೀರ್ ಸಹರಣ ಮೇಲೆ ಮತಾಂಧರು ಆಕ್ರಮಣ ಮಾಡಿದರು. ಜೂನ್ 1 ರಂದು ಚಿತ್ತೊರಗರದಲ್ಲಿ ರಾಕೇಶ್ ಸಿಂಗ್ ಎನ್ನುವ ಹಿಂದೂ ನಾಯಕನನ್ನು ಮತಾಂಧರು ಬರ್ಭರವಾಗಿ ಹತ್ಯೆ ಮಾಡಿದರು. ಕಳೆದ ವರ್ಷ ಅಗಸ್ಟ 10 ರಂದು ರಷಿರಾಜ್ ಜಿಂದಾಲ್ ಎನ್ನುವ ಹಿಂದೂ ಯುವಕನನ್ನು ಬರ್ಭರವಾಗಿ ಹತ್ಯೆ ಮಾಡಲಾಯಿತು. ಮಾರ್ಚ್ 26, 2022 ರಂದು ಮತಾಂಧನು ಹಿಂದೂ ಯುವತಿಯನ್ನು ರಾಜಸ್ಥಾನದಲ್ಲಿ ಬರ್ಭರವಾಗಿ ಹತ್ಯೆ ಮಾಡಿದನು. ಮೇ 12, 2022 ರಂದು ರಾಜಸ್ಥಾನದ ಬಲ್ವಾರ್ ನಗರದಲ್ಲಿ ಆದರ್ಶ ತಪೊಡಿಯ ಎನ್ನುವ ಯುವಕನನ್ನು ಮತಾಂಧರು ಬರ್ಭರವಾಗಿ ಹತ್ಯೆ ಮಾಡಿದರು.

ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ರಾಜಸ್ಥಾನ ಸರ್ಕಾರದ ಮುಸಲ್ಮಾನ ಸಮುದಾಯದ ಓಲೈಕೆಯ ನೀತಿಯಿಂದಾಗಿ, ಮತಾಂಧ ಶಕ್ತಿಗಳು ಕುಮ್ಮಕ್ಕಿನಿಂದ ಹಿಂದೂಗಳ ಹತ್ಯಾಖಾಂಡವನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತದೆ. ಇದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಈ ಮೇಲಿನ ಎಲ್ಲ ಘಟನೆಗಳು ಅತ್ಯಂತ ಗಂಭೀರವಾಗಿದ್ದು, ರಾಜಸ್ಥಾನದಲ್ಲಿ ಹಿಂದೂಗಳ ಅಸ್ತಿತ್ವದ ಪ್ರಶ್ನೆ ನಿರ್ಮಾಣವಾಗಿದೆ ಮತ್ತು ಅಲ್ಲಿ ಅಲ್ಪಸಂಖ್ಯಾತರಿಂದ ಹಿಂದೂ ಸಮುದಾಯವು ಅಪಾಯದಲ್ಲಿರುವುದರ ದ್ಯೋತಕವಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಈ ಎಲ್ಲ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಜಸ್ಥಾನದ ಹಿಂದೂಗಳ ರಕ್ಷಣೆಗೆ ದಾವಿಸಬೇಕು ಮತ್ತು ಅಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾದ ರಾಜಸ್ಥಾನ ಸರ್ಕಾರವನ್ನು ವಜಾ ಮಾಡಬೇಕು. ತಪ್ಪಿತಸ್ತರ ಮೇಲೆ ಉಗ್ರ ಕ್ರಮ ಜರುಗಿಸಬೇಕು ಹಾಗೂ ಹಿಂದೂಗಳಿಗೆ ರಕ್ಷಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪ್ರಭಾಕರ್ ಪಡಿಯಾರ್, ಪರಶುರಾಮ್, ಪುರಸಭೆಯ ನಾಮಿನಿ ಸದಸ್ಯ ವಿಶ್ವನಾಥ್, ಪ್ರಕಾಶ್ ಎಂ. ಎಸ್. ಗಿರೀಶ್ ಘೋರ್ಪಡೆ, ಶಿವಯ್ಯ ಶಾಸ್ತ್ರಿ, ಬೆಣ್ಣೆ ಪ್ರವೀಣ್, ವಿ. ರಘು, ಶ್ರೀನಿವಾಸ್, ಪುಷ್ಪ ಮತ್ತಿತರರು ಉಪಸ್ಥಿತರಿದ್ದರು

ಜಾಹಿರಾತು

LEAVE A REPLY

Please enter your comment!
Please enter your name here