ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಮೂಡಿಗೆರೆ ಬಂದ್ ; ಹಿಂದೂಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

0
113

ಮೂಡಿಗೆರೆ: ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೆ ಸಂಭವಿಸಿದಂತೆ ಹಿಂದೂ ಪರ ಸಂಘಟನೆಗಳು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಸಾವಿರಾರು ಕಾರ್ಯಕರ್ತರು ಸೇರಿ ಬೃಹತ್ ಮೆರವಣಿಗೆ ನಡೆಸಲಾಯಿತು.

ಎಂ.ಜಿ ರಸ್ತೆಯಲ್ಲಿ ಮೆರೆವಣಿಗೆಗೆ ಅವಕಾಶ ಕೊಡದೆ ಎಂ.ಜಿ ರಸ್ತೆಯನ್ನು ಯಾರು ಪ್ರತಿಭಟನಾಗರರು ಪ್ರವೇಶಿಸಿಸಬಾರದು ಎಂದು ಪೊಲೀಸರು ರಸ್ತೆಯ ಮುಂಭಾಗದಲೇ ಬ್ಯಾರಿಕೇಡ್ ಹಾಕಿ ತಡೆದರು.

ಖಾಕಿ ಪಡೆಯ ಈ ನಡೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಪೊಲೀಸರ ಸರ್ಪಗಾವಲನ್ನು ಭೇದಿಸಿ, ಬ್ಯಾರಿಕೇಡ್ ಗಳನ್ನು ತಳ್ಳಿ ಸಾವಿರಾರು ಕಾರ್ಯಕರ್ತರು ಎಂ. ಜಿ ರಸ್ತೆಗೆ ನುಗ್ಗಿ ಮೆರವಣಿಗೆ ನಡೆಸಿದರು.

ಶಾಲಾ-ಕಾಲೇಜು, ಆಸ್ಪತ್ರೆ, ಆಟೋ, ಬಸ್ ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ಯಾವುದೇ ತೊಂದರೆ ಇರಲಿಲ್ಲ. ಬಂದ್ ಅಂಗಡಿ-ಮುಂಗಟ್ಟುಗಳ ಮಾಲೀಕರು ಹಾಗೂ ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಹಿಂದೂ ಸಂಘಟನೆಗಳ ಬಂದ್ ಗೆ ಟೈಲರ್ ಅಸೋಸಿಯೇಷನ್ ಕೂಡ ಸಾಥ್ ನೀಡಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here