ಕಡೂರು: ದ್ವಿಚಕ್ರ ವಾಹನಗಳ ಸೈಲೆನ್ಸರ್ ಗಳನ್ನು ಮಾರ್ಪಡಿಸಿಕೊಂಡು ಕರ್ಕಶವಾಗಿ ಶಬ್ಧ ಮಾಡುತ್ತಿದ್ದ ಸೈಲೆನ್ಸರ್ ಗಳನ್ನು ಪಟ್ಟಣದ ಪೊಲೀಸರು ವಶಪಡಿಸಿಕೊಂಡು ಅವುಗಳನ್ನು ನಾಶ ಮಾಡಿದ್ದಾರೆ.
ದ್ವಿಚಕ್ರ ವಾಹನಗಳ ಸೈಲೆನ್ಸರ್ ಗಳನ್ನು ಮೋಡಿಫೈಡ್ ಮಾಡಿಕೊಂಡು ವಿಪರೀತ ಶಬ್ಧದೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿ ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಂಡಿದ್ದಾರೆ. ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಕಡೂರು ಪಟ್ಟಣದಲ್ಲಿ ನಡೆಸಿದ ವಿಶೇಷ ಅಭಿಯಾನದಲ್ಲಿ ಒಟ್ಟು 35 ವಾಹನಗಳ ಸೈಲೆನ್ಸರ್ ಗಳನ್ನು ನಾಶಪಡಿಸಲಾಗಿದೆ.