20.6 C
Shimoga
Friday, December 9, 2022

ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ತೀರ್ಥಹಳ್ಳಿ ಯುವಕ ಆಯ್ಕೆ

ತೀರ್ಥಹಳ್ಳಿ : ಪಟ್ಟಣದ ತುಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜಯಸೂರ್ಯ 18 ವರ್ಷ ಒಳಗಿನ ರಾಷ್ಟೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಈ ತಿಂಗಳ 14 ರಿಂದ 19ನೇ
ತಾರೀಕಿನವರೆಗೆ ಪಂದ್ಯಾವಳಿ ನಡೆಯಲಿದೆ. ಜಮಖಂಡಿಯಲ್ಲಿ
ಬುಧವಾರದವರೆಗೆ ನಡೆದ ಆಯ್ಕೆ ಶಿಬಿರದಲ್ಲಿ ಈ ಪ್ರತಿಭಾವಂತ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.


ತುಂಗಾ ಪಿಯೂ ಕಾಲೇಜಿನಲ್ಲಿ ಕಾಮರ್ಸ್ ದ್ವಿತೀಯ ವರ್ಷದಲ್ಲಿ
ಓದುತ್ತಿರುವ ಈತ ಸೊಪ್ಪುಗುಡ್ಡೆ ವಾಸಿ ಶಿಕ್ಷಕ ದಂಪತಿಗಳಾದ
ಭಾರತಿ ಹಾಗೂ ಜಗದೀಶ್‌ರವರ ಪುತ್ರನಾಗಿದ್ದಾನೆ. ತುಂಗಾ ಕಾಲೇಜು ಆಡಳಿತ ಮಂಡಳಿ ಹಾಗೂ ಬೋದಕ ಭೋದಕೇತರ ಸಿಬ್ಬಂದಿಗಳು ಈತನಿಗೆ ಶುಭ ಹಾರೈಸಿದ್ದಾರೆ.

ವರದಿ: ರಶ್ಮಿ ಶ್ರೀಕಾಂತ್ ನಾಯಕ್

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!