ಕಲಗೋಡು ರತ್ನಾಕರ್ ರವರಿಗೆ ಅಭಿನಂದನಾ ಸಮಾರಂಭ | ಸೈದ್ಧಾಂತಿಕ ನೆಲೆ ಗಟ್ಟಿನ ಮೇಲೆ ಪಕ್ಷವನ್ನು ಸಂಘಟಿಸಲು ಕಿಮ್ಮನೆ ರತ್ನಾಕರ್ ಕಾರ್ಯಕರ್ತರಿಗೆ ಕರೆ

0
802

ರಿಪ್ಪನ್‌ಪೇಟೆ: ದೇಶದಲ್ಲಿ ಸಾಮಾಜಿಕನ್ಯಾಯ ಸರ್ವಜನಾಂಗದವರಲ್ಲಿ ಸಮಾನತೆ ಸೋದರತ್ವ ಸಹಬಾಳ್ವೆಯೊಂದಿಗೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.

ಕೋಡೂರು ಶಂಕರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್‌ರವರಿಗೆ ಕಾರ್ಯಕರ್ತರ ಮತ್ತು ಅಭಿಮಾನಿಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದಲ್ಲಿ ಕಳೆದ ಮೂರೂವರೆ ದಶಕಗಳ ಕಾಲ ಸಕ್ರಿಯರಾಗಿ ಕಾರ್ಯನಿರ್ವಹಿಸಿ ವಿವಿಧ ಹುದ್ದೆಗಳಲ್ಲಿ ಅಲಂಕರಿಸಿರುವ ಕಲಗೋಡು ರತ್ನಾಕರ್‌ರವರ ಸಂಘಟನಾ ಚತುರತೆಯನ್ನು ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಗುರುತಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಶ್ಲಾಘನೀಯವೆಂದರು.

ಹುಟ್ಟೂರಿನಲ್ಲಿನ ಸನ್ಮಾನ ಸ್ವೀಕರಿಸುವುದು ಒಂದು ಪುಣ್ಯವೆಂದ ಅವರು ಕಲಗೋಡು ರತ್ನಾಕರ್ ಕೋಡೂರು ಗ್ರಾಮ ಪಂಚಾಯ್ತಿ ಕಾಂಗ್ರೆಸ್ ಪಕ್ಷದ ಕಾರ್ಯದಶಿಯಾಗಿ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷರಾಗಿ ತಾಲ್ಲೂಕ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಪಕ್ಷದ ಸಂಘಟನೆಯೊಂದಿಗೆ ಎಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಪಕ್ಷವನ್ನು ಬಿಡದೆ ದುಡಿದವರಾಗಿದ್ದಾರೆ ಅಂತಹವರಿಗೆ ಪಕ್ಷದ ಉನ್ನತ ಹುದ್ದೆ ನೀಡಿರುವುದು ಉಳಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಗುರುತಿಸುತ್ತಾರೆಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಕೋಮವಾದಿ ಬಿಜೆಪಿ ಸರ್ಕಾರ ಕಿತ್ತು ಎಸೆಯಲು ಸಂಘಟನೆ ಮುಖ್ಯ:

ರಾಜ್ಯ ಮತ್ತು ದೇಶದಲ್ಲಿನ ಬಿಜೆಪಿ ಸರ್ಕಾರ ಹಿಂದು ಹೆಸರಿನಲ್ಲಿ ಕೋಮುವಾದ ಹುಟ್ಟುಹಾಕಿ ದ್ವೇಷಾಭಾವನೆ ಬೆಳಸುತ್ತಿದ್ದು ಮುಸ್ಲಿಂ ಕ್ರಿಶ್ಚಿಯನ್ ಧರ್ಮೀಯರಲ್ಲಿ ಮತೀಯ ಭಾವನೆ ಬೆಳಸುತ್ತಿದ್ದಾರೆ ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹಿಂದುಗಳಲ್ಲಿನ ಜಾತಿಯನ್ನು ಸಹ ಒಡೆಯುತ್ತಾರೆಂಬುದಕ್ಕೆ ಕಾಲ ದೂರವಿಲ್ಲ ಆ ಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನೆಯೊಂದಿಗೆ ಕಾಂಗ್ರೇಸ್ ಪಕ್ಷವನ್ನು ಬಲಿಷ್ಟಗೊಳಿಸಲು ಯುವ ಸಮೂಹ ಮುಂದಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ಆಸ್ತಿ 3600 ಕೋಟಿ ರೂ.:

ಕಳೆದ 40-50 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದ ಆಸ್ತಿ ಕೇವಲ 800 ಕೋಟಿ ರೂ. ಆದರೆ ಕೇವಲ ಏಳು ವರ್ಷದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಅಸ್ತಿ 3600 ಕೋಟಿ ರೂ. ಇದು ಹೇಗೆ ಸಾಧ್ಯ ಎಂದು ಹೇಳುವ ಮೂಲಕ ಭ್ರಷ್ಟಾಚಾರವೇ ಬಿಜೆಪಿಯ ಪ್ರಮುಖ ಅಜೆಂಡಾವಾಗಿದೆ. ಈಗಾಗಲೇ ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಭಾರಿ ಭ್ರಷ್ಟಾಚಾರ ನಡೆದಿದ್ದರೂ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಕಮೀಷನ್ ಹೆಸರಿನಲ್ಲಿ ಅಮಾಯಕ ಗುತ್ತಿಗೆದಾರರನ್ನು ಸಂತೋಷ್ ಕೆ.ಪಾಟೀಲ್ ಬಿಲ್ ಪಡೆದಿರುವ ಸಚಿವ ಈಶ್ವರಪ್ಪನವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸುವಂತೆ ಆಗ್ರಹಿಸಿ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸುವುದಾಗಿ ವಿವರಿಸಿದರು.

ನಾಡಗೀತೆಯ ಅರ್ಥವೇ ಗೊತ್ತಿಲ್ಲದ ಬಿಜೆಪಿಯ ನಾಯಕರುಗಳು:

ರಾಷ್ಟ್ರಕವಿ ಕುವೆಂಪುರವರು ಸ್ವಾತಂತ್ರ್ಯಕ್ಕೂ ಮೊದಲು ಬರೆದಿರುವ ನಾಡಗೀತೆಯ ಅರ್ಥವನ್ನು ತಿಳಿಯದ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಇನ್ನಿತರ ಸಚಿವರುಗಳಿಗೆ ಸೆಲ್ಲ್ಯೂಟ್ ಹೊಡೆಯಲು ನಾಲಾಯಕ್ ಇಂತವರ ಕೈಗೆ ಅಧಿಕಾರ ನೀಡಿರುವ ನಾವುಗಳು ಮೂರ್ಖರು ಎಂದು ವ್ಯಾಖ್ಯಾನಿಸಿದರು.

ವಿದ್ಯಾವಂತರಿಂದಲೇ ದೇಶದಲ್ಲಿ ಅಶಾಂತಿ ಅರಾಜಕತೆ ಸೃಷ್ಠಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಮಾಜಿ ಸಚಿವರು, ಸೈದ್ಧಾಂತಿಕ ನೆಲೆ ಗಟ್ಟನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಪಕ್ಷದ ತತ್ವ ಸಿದ್ದಾಂತ ಮತ್ತು ಅಭಿವೃದ್ದಿಯನ್ನು ಮತದಾರರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಾಗಿದೆ ಅಲ್ಲದೆ ಕಾರ್ಯಕರ್ತರು ಸಂಖ್ಯೆ ಕಡಿಮೆ ಇರಬಹುದು ಅದರೆ ತಳಮಟ್ಟದಿಂದ ಪಕ್ಷವನ್ನು ಬೆಳಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಿದ್ದರಾಗಬೇಕು ಎಂದರು.

ಹುಟ್ಟೂರಿನ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ರಾಜಕೀಯ ನಿಂತ ನೀರಾಗದೆ ಹರಿಯುವ ನೀರಾಗಬೇಕು. ಅಧಿಕಾರ ಮುಖ್ಯವಲ್ಲ ಜನಸೇವೆಯೊಂದಿಗೆ ಸದಾ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ನಾವುಗಳು ಸಕ್ರಿಯರಾಗಿರಬೇಕು. ನಿತ್ಯ ನಾನು ಸಮಾಜ ಸೇವೆಯೊಂದಿಗೆ ಸಹಕಾರ ಬಯಸಿ ಬಂದವರಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುತ್ತಿರುವುದು ಸಂತೃಪ್ತಿ ತಂದಿದೆ ಇಂತಹ ಸಂದರ್ಭದಲ್ಲಿ ನನಗೆ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿಯ ಜವಾಬ್ದಾರಿ ಹುದ್ದೆ ನೀಡಿರುವುದು ಇನ್ನೂ ಹೆಚ್ಚು ಜವಾಬ್ದಾರಿ ವಹಿಸಿದಂತಾಗಿದೆ ಇದನ್ನು ಪ್ರಮಾಣಿಕವಾಗಿ ನಿರ್ವಹಿಸುವುದರೊಂದಿಗೆ ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿ ಕಾರ್ಯಕರ್ತರ ಮತ್ತು ಅಭಿಮಾನಿಗಳ ಹುಟ್ಟೂರಿನ ಸನ್ಮಾನ ನೂರು ಸನ್ಮಾನಕ್ಕಿಂತ ಮಿಗಿಲಾದುದ್ದು ಎಂದರು.

ಹೊಸನಗರ ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಕೋಣಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಎಐಸಿಸಿ ಸಮಿತಿಯ ಆದರ್ಶ ಹುಂಚದಕಟ್ಟೆ, ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿಗೌಡ, ಜಿ.ಪಂ.ಮಾಜಿ ಸದಸ್ಯ ರಾಮಚಂದ್ರ ಬಂಡಿ, ಎನ್.ಇ.ಎಸ್.ಸಂಸ್ಥೆಯ ನೂತನ ಅಧ್ಯಕ್ಷ ನಾರಾಯಣರಾವ್, ಹುಂಚ ಘಟಕದ ಕಾಂಗ್ರೆಸ್ ಅಧ್ಯಕ್ಷ ಗುರುರಾಜ ಸುಣ್ಣಕಲ್, ವೀರಭದ್ರಪ್ಪ, ಅಮ್ಮರನಾಥಶೆಟ್ಟಿ, ಪುಷ್ಪಾವತಿ ಮಂಜಪ್ಪ, ಮುಂಬಾರು ಗ್ರಾ.ಪಂ ಅಧ್ಯಕ್ಷರು, ಕೋಡೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ವೈ.ಜಯಂತ್, ಕೋಡೂರು ವಿಎಸ್‌ಎಸ್.ಎನ್ ಅಧ್ಯಕ್ಷ ವಾಸುದೇವ್, ಸುಬ್ರಹ್ಮಣ್ಯ, ಬಿ.ಎಸ್.ಈಶ್ವರಪ್ಪಗೌಡ ಬೈದೂರು, ಸ್ವಾಮಿಗೌಡರು, ಅಮ್ರಪಾಲಿ ಸುರೇಶ್ ಇನ್ನಿತರ ಹಲವರು ಪಾಲ್ಗೊಂಡಿದ್ದರು.

ಗುರುರಾಜ್ ಜಯನಗರ ಪ್ರಾರ್ಥಿಸಿ, ನಿರೂಪಿಸಿದರು. ಸುಬ್ಬಣ್ಣ ಸ್ವಾಗತಿಸಿದರು. ವೇದಾಂತಗೌಡ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here