ಕಲ್ಲಂಗಡಿ ಒಡೆದಾಗ ಬೊಬ್ಬೆ ಹಾಕಿದ ಕಾಂಗ್ರೆಸ್ಸಿಗರು ಪೊಲೀಸರ ತಲೆ ಒಡೆದರೂ ಸುಮ್ಮನ್ನಿದ್ದಾರೆ : ಕೆಎಸ್ಈ

0
191

ಶಿವಮೊಗ್ಗ: ಕಲ್ಲಂಗಡಿ ಒಡೆದಾಗ ಬೊಬ್ಬೆ ಹಾಕಿದ ಕಾಂಗ್ರೆಸ್ಸಿಗರು ಪೊಲೀಸರ ತಲೆ ಒಡೆದರೂ ಸುಮ್ಮನ್ನಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತವಾಗಿದ್ದ ರಾಜ್ಯವನ್ನು ಕೊಲೆ, ದೊಂಬಿ, ಗದ್ದಲದ ಮೂಲಕ ಅಶಾಂತಿ ಹುಟ್ಟಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಇದನ್ನು ಪತ್ತೆ ಹಚ್ಚಬೇಕಾಗಿದೆ. ಕಲ್ಲು ತೂರಾಟ ನಡೆಸುವ, ದೊಂಬಿ ನಡೆಸುವ ಪುಂಡರಿಗೆ ತಕ್ಕ ಪಾಠ ಕಲಿಸುವ ಶಕ್ತಿ ಹಿಂದೂ ಸಂಘಟನಗಳಿಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡ್ತಾನೆ. ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದಿಸುವ ಹೇಳಿಕೆ ಕೊಡ್ತಾನೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯೋದು ನೋಡ್ತಿದ್ದಾನೆ. ಆಸ್ಪತ್ರೆ, ದೇವಾಲಯ, ಪೊಲೀಸ್ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಅಲ್ಲಾ ಹು ಅಕ್ಬರ್ ಜೊತೆಗೆ ಆರ್.ಎಸ್.ಎಸ್. ಮುರ್ದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ. ಈ ರೀತಿಯ ಕಲ್ಲು ತೂರಾಟ ಮಾಡುವ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಇಂತಹ ಪುಂಡರನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಅದ್ರೇ, ನಾವು ಕಾನೂನು ಕೈಗೆ ತೆಗೆದುಕೊಳ್ಳಲು ಇಷ್ಟ ಪಡಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತೆ ಎಂದರು.

ಹುಬ್ಬಳ್ಳಿಯ ಗಲಭೆಗೆ ಪ್ರಚೋದನೆ ನೀಡಿದನ ನಂತರ ಮೌಲ್ವಿ ಹೇಡಿಯ ರೀತಿ ಓಡಿ ಹೋಗಿದ್ದಾನೆ. ಗೂಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿ ಬಂಧನವಾಗಬೇಕು ಎಂದು ಒತ್ತಾಯಿಸಿದ ಅವರು, ಕೆಜಿ ಹಳ್ಳಿ, ಡಿಜಿ ಹಳ್ಳಿ, ಶಿವಮೊಗ್ಗದ ಹರ್ಷ, ಚಂದ್ರು ಕೊಲೆಯಾಯಿತು. ಇದೀಗ ಹುಬ್ಬಳಿ ಘಟನೆ ನಡೆದಿದೆ ಎಂದರು.

ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು. ಸಿಸಿ ಟಿವಿ ಆಧರಿಸಿ, ಈಗಾಗಲೇ ಬಂಧನ ಮಾಡಲಾಗುತ್ತಿದೆ. ಗೂಂಡಾ ಕಾಯ್ದೆ ಅಡಿ ಅವರನ್ನು ಬಂಧನ ಮಾಡಿ, ಗಡಿಪಾರು ಮಾಡಬೇಕು. ಕೊಲೆ, ದೊಂಬಿ ಮಾಡೋದು, ಬೇಲ್ ಪಡೆದು ವಾಪಸ್ ಬರೋದು ಅವರಿಗೆ ಅಭ್ಯಾಸ ಅಗಿದೆ. ಘಟನೆಗಳಿಗೆ ಕಾರಣರಾದ ವ್ಯಕ್ತಿ, ಸಂಘಟನೆ, ಪಕ್ಷದ ಬಗ್ಗೆ ಗಮನ ಹರಿಸಬೇಕು ಎಂದರು.

ಇಷ್ಟೆಲ್ಲಾ ಘಟನೆ ನಡೆದರೂ ಕಾಂಗ್ರೆಸ್ ಖಂಡಿಸುವ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾತನಾಡ್ತಿಲ್ಲ. ಎಲ್ಲಾ ಮುಸಲ್ಮಾನರು ರಾಷ್ಟ್ರದ್ರೋಹಿಗಳು ಅಂತಾ ನಾನು ಹೇಳಲ್ಲ ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುವ ಕೆಲಸ ಮಾಡ್ತಿದೆ. ಇದನ್ನು ಇಡೀ ಹಿಂದೂ ಸಮಾಜ, ರಾಷ್ಟç ಭಕ್ತರು ಗಮನಿಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಧಾಹಕ್ಕೆ ಕೊಲೆ, ದೊಂಬಿಗಳಾಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಸಿಎಂ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗ ಬೇರೆ ಉದ್ಯೋಗವೇ ಇಲ್ಲ. ಒಂದು ಮುಸಲ್ಮಾನರ ತೃಪ್ತಿಪಡಿಸೋದು. ಇನ್ನೋಂದು ಕಮಿಷನ್ ಬಗ್ಗೆ ಮಾತನಾಡೋದು. ಕಮಿಷನ್ ಆರೋಪದ ಬಗ್ಗೆ ಎಲ್ಲರೂ ಮಾತನಾಡ್ತಾರೆ. 10, 20, 40% ಅಂತಾ ಬಾಯಿಗೆ ಬಂದಂತೆ ಕಮಿಷನ್ ಬಗ್ಗೆ ಮಾತನಾಡ್ತಾರೆ. ಸಂತೋಷ್ ಪಾಟೀಲ್ ಸಾವಿಗೆ ಯಾರು ಕಾರಣ ಅದಕ್ಕೆ. ಈಗ ತನಿಖೆ ನಡೆಯುತ್ತಿದೆ. ತನಿಖೆಯಾಗಿ ಸತ್ಯ ಹೊರಬರಲಿ. ನಾನು ಅದರ ಬಗ್ಗೆ ಮಾತನಾಡಲ್ಲ. ದಿಂಗಾಲೇಶ್ವರ ಶ್ರೀಗಳು ಈಶ್ವರಪ್ಪ ನಿರಪರಾಧಿ ಎಂದು ಹೇಳಿದ್ದಾರೆ. ಪ್ರಕರಣದಿಂದ ಮುಕ್ತರಾಗಿ ಹೊರಗೆ ಬರ್ತಾರೆ ಎಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಗುತ್ತಿಗೆದಾರ ಕನಕಪುರದ ಕೆಂಪಣ್ಣ ಕಾಂಗ್ರೆಸ್ಏಜೆಂಟ್. ಬೀದಿಯಲ್ಲಿ ಹೋಗೋ ದಾಸಯ್ಯ ಹೇಳಿದ್ಕೆಲ್ಲಾ ಸರ್ಕಾರ ಉತ್ತರ ಕೋಡೊಕೆ ಅಗುತ್ತಾ? ಕೋಮುಗಲಭೆ ಸೃಷ್ಟಿಸೋದು, ಭ್ರಷ್ಟಾಚಾರದ ಬಗ್ಗೆ ಮಾತಾಡೋದು ಇಷ್ಟೇ ಅಗಿದೆ. ಇದನ್ನು ಕಂಟ್ರೋಲ್ ಮಾಡುವ ತಾಕತ್ತು ಸರ್ಕಾರಕ್ಕೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತೀರ್ಮಾನ ತೆಗೆದುಕೊಳ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರತಾಳು ಹಾಲಪ್ಪ, ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ನಗರಾಧ್ಯಕ್ಷ ಜಗದೀಶ್ ಮತ್ತಿತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here