ಭದ್ರಾವತಿ: ಸೋಮವಾರ ರಾತ್ರಿ ಸಮಯದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಡಣಾಯಕಪುರ ಗ್ರಾಮದ ವಾಸಿ ಬಸಪ್ಪ (54) ಎಂಬುವವರನ್ನು ಯಾರೋ ದುಷ್ಕರ್ಮಿಗಳು ಯಾವುದೊ ದ್ವೇಷದ ಹಿನ್ನೆಲೆಯಲ್ಲಿ ಮುಖ ಮತ್ತು ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ಮೃತ ವ್ಯಕ್ತಿ ಬಸಪ್ಪ ರವರ ಮಗ ಮಂಜಪ್ಪ ರವರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಲಂ 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
