ಕಳೂರು ಶ್ರೀ ರಾಮೇಶ್ವರ ಪತ್ತಿನ ಸಹಕಾರ ಸಂಘ 33 ಲಕ್ಷ ರೂ. ಲಾಭಾಂಶದಲ್ಲಿದೆ: ದುಮ್ಮ ವಿನಯ್ ಕುಮಾರ್

0
404

ಹೊಸನಗರ: ಪಟ್ಟಣದ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಸಹಕಾರಿ ಸಂಘವು 2020-21ನೇ ಸಾಲಿನಲ್ಲಿ ಸುಮಾರು ಅಂದಾಜು 33,23,585 ರೂ. ನಷ್ಟು ಲಾಭಾಂಶ ಹೊಂದಿದೆ ಎಂದು ಕಳೂರು ಶ್ರೀ ರಾಮೇಶ್ವರ ಸಹಕಾರ ಸಂಘದ ಅಧ್ಯಕ್ಷರಾದ ದುಮ್ಮ ವಿನಯ್ ಕುಮಾರ್‌ರವರು ಹೇಳಿದರು.

ಪಟ್ಟಣದ ಕಳೂರು ಸೊಸೈಟಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕಳೂರು ಸಹಕಾರ ಸಂಸ್ಥೆಯು ಪ್ರರಂಭವಾಗಿ ಸುಮಾರು 74 ವರ್ಷ ಕಳೆದಿದೆ ಹಿಂದಿನ ಆಡಳಿತ ಮಂಡಳಿಯವರ ಸಹಕಾರದೊಂದಿಗೆ ನಮ್ಮ ಸಂಸ್ಥೆ ಈ ಮಟ್ಟಿಗೆ ಬೆಳೆದಿದೆ. ನಮ್ಮಲ್ಲಿ ಇಲ್ಲಿಯವರೆಗೆ ಒಟ್ಟು 2312 ಷೇರುದಾರರಿದ್ದು ಬಂಡವಾಳ ಹೂಡಲಾಗಿದೆ, ನಮ್ಮ ಸಂಸ್ಥೆಯಲ್ಲಿ 837 ಜನ ಠೇವಣಿದಾರರಿದ್ದು 4ಕೋಟಿ ರೂ. ಗಿಂತಲೂ ಹೆಚ್ಚು ಬಂಡವಾಳ ಹೂಡಿದ್ದಾರೆ. ನಮ್ಮ ಸಂಸ್ಥೆಯಿಂದ 730ಜನ ರೈತರಿಗೆ ಬೆಳೆ ಸಾಲವನ್ನು 5ಕೋಟಿಗಿಂತಲೂ ಹೆಚು ಹಣವನ್ನು ರೈತರಿಗೆ ನೀಡಲಾಗಿದೆ ನಮ್ಮ ಸಂಸ್ಥೆಯಲ್ಲಿ 1117 ರೈತರಿಗೆ 9ಕೋಟಿ ರೂ. ಗಿಂತಲೂ ಹೆಚ್ಚು ಸಾಲ ನೀಡಲಾಗಿದೆ ಎಂದರು.

ಸರ್ಕಾರದ ಸಾಲ ಮನ್ನಾ ಯೋಜನೆಯಡಿಯಲ್ಲಿ 457 ಜನರು ಯೋಜನೆಯನ್ನು ಪಡೆದುಕೊಂಡಿದ್ದು 1 ರೂ. ಕೋಟಿಗಿಂತಲೂ ಹೆಚ್ಚು ಹಣವನ್ನು ರೈತರಿಗೆ ಸಾಲ ಮನ್ನಾ ಯೋಜನೆಯ ಉಪಯೋಗ ಪಡೆದುಕೊಂಡಿದ್ದಾರೆ.

ಒಟ್ಟು 2020-21ನೇ ಸಾಲಿನಲ್ಲಿ 71ಕೋಟಿ ವ್ಯವಹಾರ ನಡೆಸಲಾಗಿದೆ ಈ ವರ್ಷ ಸಾಲದಲ್ಲಿ 99%ರಷ್ಟು ಹಣ ವಾಸೂಲಾತಿ ಮಾಡಲಾಗಿದೆ ಎರಡು ವರ್ಷ ದೇಶದಲ್ಲಿ ಕಾರೋನ ಇರುವ ಸಂದರ್ಭದಲ್ಲಿಯು ನಮ್ಮ ಸಂಸ್ಥೆಗೆ ಯಾವುದೇ ರೀತಿಯಲ್ಲಿಯು ರೈತರು ತೊಂದರೆ ನೀಡದೇ ಸಂಸ್ಥೆ ಬೆಳೆಸಲು ಸಹಕರಿಸಿದ್ದಾರೆ ಇನ್ನೂ ಮುಂದೆಯು ಈ ಸಂಸ್ಥೆ ಬೆಳೆಸಲು ಸಹಕರಿಸಬೇಕು ಅದೇ ರೀತಿ ಮುಂದಿನ ವರ್ಷ ನಮ್ಮ ಸಂಸ್ಥೆ ಸ್ಥಾಪನೆಯಾಗಿ 75 ವರ್ಷಕ್ಕೆ ಕಾಲಿಡಲಿದ್ದು ನೂತನ ಕಟ್ಟಡದಲ್ಲಿ 75ನೇ ವರ್ಷ ಆಚರಣೆ ನಡೆಸಲು ತೀರ್ಮಾನಿಸಿದ್ದು ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಟ್ಟಡದ ಕಾಮಾಗಾರಿ ಆರಂಬಿಸಲಿದ್ದೇವೆ ಎಂದರು.

ಅಭಿನಂದನೆ:

ಸುಧೀರ್ಘ 74 ವರ್ಷ ಆಡಳಿತ ನಡೆಸಿ ರೈತರಿಗೆ ಸಹಕಾರಿಯಾಗಿರುವ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಹಕರಿಸಿರುವ ಸಂಸ್ಥೆಯ ಶೇರುದಾರರಿಗೆ, ರೈತರಿಗೆ, ನಮ್ಮ ಸಹಕಾರಿ ಸಂಸ್ಥೆಯಲ್ಲಿ ವ್ಯವಹಾರಿಸಿದ ರೈತ ಕುಟುಂಬಗಳಿಗೆ, ಹಿರಿಯ ಸಹಕಾರಿಗಳಿಗೆ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಗೆ, ಸಹಕಾರಿ ಇಲಾಖೆಯ ಆಡಳಿತ ಮಂಡಳಿ, ಹಾಗು ನಿರ್ದೆಶಕರಿಗೆ, ಅಧಿಕಾರಿಗಳಿಗೆ, ನಮ್ಮ ಸಂಸ್ಥೆಯ ನೌಕರ ವರ್ಗದವರಿಗೆ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here