ಕಳೆದ ಮೂರುವರೆ ದಶಕಗಳಿಂದ ಸ್ಥಗಿತಗೊಂಡಿದ್ದ ನಗರ ಗುಜರಿಪೇಟೆ ಶ್ರೀ ವೆಂಕಟರಮಣಸ್ವಾಮಿ ದೇವರ ಅದ್ಧೂರಿ ರಥೋತ್ಸವ

0
889

ಹೊಸನಗರ : ತಾಲೂಕಿನ ಬಿದನೂರು ನಗರದ ಐತಿಹಾಸಿಕ ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವ ಇಂದು ಅದ್ದೂರಿಯಾಗಿ ನಡೆಯಿತು.

ಕೆಲವು ಕಾರಣಗಳಿಂದ ಕಳೆದ ಮೂರುವರೆ ದಶಕಗಳಿಂದ ಸ್ಥಗಿತಗೊಂಡಿದ್ದ ರಥೋತ್ಸವಕ್ಕೆ ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಬಾಂಧವರು ಒಗ್ಗೂಡಿ ನೂತನ ಸಮಿತಿ ರಚಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ, ಪವಮಾನ ಕಲಶ, ಪ್ರಾಯಶ್ಚಿತ್ತ ಹವನ, ರಥ ಶುದ್ದಿ ನಂತರ ಶ್ರೀದೇವರ ರಥಾರೋಹಣ ಹಾಗೂ ಪಟ್ಟಣದ ರಥಬೀದಿಯಲ್ಲಿ ಸೀಮನ್ ಮಹಾರಥೋತ್ಸವ ರಥಬೀದಿಯನ್ನು ತಳಿರು ತೋರಣಗಳಿಂದ ಅಲಂಕರಿಸಿ ರಸ್ತೆಯುದ್ದಕ್ಕೂ ರಂಗೋಲಿಗಳಿಂದಾಗಿ ರಥಬೀದಿಯನ್ನು ಸಿಂಗರಿಸಲಾಗಿತ್ತು.

ಏ.11 ಸೋಮವಾರ ಬೆಳಗ್ಗೆ ವರ್ಧಂತ್ಯುತ್ಸವದ ಅಂಗವಾಗಿ ಅವಬ್ರತ ಓಕಳಿ ಉತ್ಸವ ಶತಕಲಶಾಭಿಷೇಕ ಮಹಾಪೂಜೆ ಅನ್ನಸಂತರ್ಪಣೆ ಪುರೋತ್ಸವ ನಡೆಯಲಿದೆ ಎಂದು ಆಡಳಿತ ಸಮಿತಿ ತಿಳಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here