ಹೊಸನಗರ: ನಿನ್ನೆಯಿಂದ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು ಕೆರೆ – ಕಟ್ಟೆ, ಹಳ್ಳ – ಕೊಳ್ಳಗಳು ಬಹುತೇಕ ತುಂಬಿ ಹರಿಯುತ್ತಿವೆ.
ಸೋಮವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ 24 ಗಂಟೆಗಳಲ್ಲಿ ತಾಲೂಕಿನ ಹುಲಿಕಲ್ಲಿನಲ್ಲಿ 169.4 ಮಿ.ಮೀ, ಹೊಸನಗರದಲ್ಲಿ 147.2, ಲಿಂಗನಮಕ್ಕಿಯಲ್ಲಿ 109, ಹುಂಚದಲ್ಲಿ 71 ರಿಪ್ಪನ್ಪೇಟೆಯಲ್ಲಿ 40 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 8:00 ಗಂಟೆಗೆ 1759.05 ಅಡಿ ತಲುಪಿದ್ದು ಕಳೆದ ವರ್ಷ ಇದೆ ಅವಧಿಗೆ 1784.70 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 1700 ಕ್ಯೂಸೆಕ್ ನೀರು ಹರಿದು ಬರುತ್ತಿದೆ.