23.2 C
Shimoga
Sunday, November 27, 2022

ಕಸಬಾ, ಕೆರೆಹಳ್ಳಿ ಹೋಬಳಿಯ 1167 ಹಳ್ಳಿಗಳ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ 422 ಕೋಟಿ ರೂ. ; ಶಾಸಕ ಹರತಾಳು ಹಾಲಪ್ಪ ಅಭಿನಂದನೆ

ರಿಪ್ಪನ್‌ಪೇಟೆ: ಸಾಗರ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲ್ಲೂಕಿನ ಕಸಬಾ ಮತ್ತು ಕೆರೆಹಳ್ಳಿ ಹೋಬಳಿಯ 1167 ಹಳ್ಳಿಗಳ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ 422 ಕೋಟಿ ರೂ. ಪ್ರಾಸ್ತಾವನೆಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರರವರನ್ನು ಮತ್ತು ಸಚಿವ ಸಂಪುಟದವರನ್ನು ಅಭಿನಂದಿಸಿದರು.


ರಿಪ್ಪನ್‌ಪೇಟೆಯ ಬಿಜೆಪಿ ಪಕ್ಷದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹೊಸನಗರ ತಾಲ್ಲೂಕಿನ ಪಟ್ಟಣ ಪಂಚಾಯ್ತಿ ಮತ್ತು 30 ಗ್ರಾಮ ಪಂಚಾಯ್ತಿಗಳಿಗೆ 50, 25, 15, 10 ಮತ್ತು 5 ಸಾವಿರ ಲೀಟರ್ ಸಾಮರ್ಥ್ಯದ ಒಟ್ಟು 180 ಓವರ್ ಹೆಡ್‌ಟ್ಯಾಂಕ್ ನಿರ್ಮಾಣದೊಂದಿಗೆ 780 ಕಿ.ಮೀ ದೂರ 1167 ಗ್ರಾಮಗಳಿಗೆ ಚಕ್ರಾವರಾಹಿ ಶರಾವತಿ ನದಿಯಿಂದ ಶುದ್ದ ಕುಡಿಯುವ ನೀರು ಸರಬರಾಜು ಮಾಡವ ಈ ಯೋಜನೆಯಾಗಿದ್ದು ನಾಗೋಡಿಯಿಂದ ಸೂಡೂರು ವ್ಯಾಪ್ತಿಯ ಮಜರೆ ಕಂದಾಯ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುವುದೆಂದು ವಿವರಿಸಿ 2053ನೇ ಇಸವಿಯವರೆಗಿನ ಮುಂದಾಲೋಚನೆಯ ಈ ಯೋಜನೆಯಾಗಿದೆ ಎಂದು ವಿವರಿಸಿದರು.


ಈಗಾಗಲೇ ಸಾಗರ ತಾಲ್ಲೂಕಿನ ಎರಡು ಹೋಬಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶೇಕಡಾ 90 ಮುಗಿದಿದ್ದು ಉಳಿದ ಶೇಕಡಾ 10 ಪೂರ್ಣ ಪ್ರಗತಿಯಲ್ಲಿದೆ ನಾವು ಮಾಡುವ ಕೆಲಸ ಸಾಧನೆಯಾಗಬೇಕೆಂಬ ವಿಶ್ವಾಸದೊಂದಿಗೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ ಮುಂಬರುವ ದಿನಗಳಲ್ಲಿ ಸಾಗರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ವಿನಾಯಕ ವೃತ್ತದಿಂದ ತಲಾ ಒಂದೊಂದು ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲಾಗುತ್ತಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಜಿ.ಪಂ.ಮಾಜಿ ಸದಸ್ಯ ಎ.ಟಿ.ನಾಗರತ್ನ, ಪಕ್ಷದ ಮುಖಂಡರಾದ ಆರ್.ಟಿ.ಗೋಪಾಲ, ಎಂ. ಸುರೇಶ್‌ಸಿಂಗ್, ಸುಂದರೇಶ್, ಮಹಾಲಕ್ಷ್ಮಿ, ಎನ್.ಸತೀಶ್, ಸುಧೀಂದ್ರ ಪೂಜಾರಿ, ವಿನೋಧ, ವನಮಾಲ, ಯೋಗೇಂದ್ರಗೌಡ, ಮೆಣಸೆ ಆನಂದ, ಪಿ.ರಮೇಶ್, ಕೆ.ಬಿ.ಹೂವಪ್ಪ ಇನ್ನಿತರ ಹಲವರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!