ಕಸಾಪ ಚುನಾವಣೆ: ಜಿಲ್ಲಾಧ್ಯಕ್ಷರಾಗಿ ಸೂರಿ ಶ್ರೀನಿವಾಸ್ ಆಯ್ಕೆ

0
249

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಂ.ಸಿ.ಶಿವಾನಂದ ಸ್ವಾಮಿ ಎದುರು 650 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

ಅಧ್ಯಕ್ಷೀಯಗಾಧಿ ಕಣದಲ್ಲಿ ಎಂ.ಸಿ.ಶಿವಾನಂದಸ್ವಾಮಿ, ಸುಂದರ್‍ ಬಂಗೇರಾ, ಬಿಳಿಗಿರಿ ವಿಜಯಕುಮಾರ್, ಸೂರಿ ಶ್ರೀನಿವಾಸ್, ಎಚ್.ಡಿ.ರೇವಣ್ಣ ಸ್ಫರ್ಧಿಸಿದ್ದರು. ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಮತ್ತು ಎಂ.ಸಿ.ಶಿವಾನಂದ ಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಸಿದ್ದು, ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ.

ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿತು.

ನರಸಿಂಹರಾಜಪುರ 60, ಬಾಳೆಹೊನ್ನೂರು 55, ಕಳಸ 18, ಯಗಟಿ 104, ಅಜ್ಜಂಪುರ 153, ಕೊಪ್ಪ 103, ಶೃಂಗೇರಿ 157, ಜಯಪುರ 66, ಬೀರೂರು 79, ಆಲ್ದೂರು 58, ಮೂಡಿಗೆರೆ 202 ಚಿಕ್ಕಮಗಳೂರು 421 ಹಾಗೂ ಕಡೂರಿನಲ್ಲಿ 763 ಮತಗಳನ್ನು ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಪಡೆದುಕೊಂಡರು. ನರಸಿಂಹರಾಜಪುರ ಮತಗಟ್ಟೆಯಲ್ಲಿ 67, ಬಾಳೆಹೊನ್ನೂರು 41, ಕಳಸ 8, ಯಗಟಿ 188, ಅಜ್ಜಂಪುರ 203, ಕೊಪ್ಪ 39, ಶೃಂಗೇರಿ 107, ಜಯಪುರ 32, ಬೀರೂರು 147, ಆಲ್ದೂರು 61, ಮೂಡಿಗೆರೆ 98, ಚಿಕ್ಕಮಗಳೂರು 333 ಒಟ್ಟು 542ಮತಗಳನ್ನು ಎಂ.ಸಿ.ಶಿವಾನಂದಸ್ವಾಮಿ ಪಡೆದುಕೊಂಡರು.

ಜಾಹಿರಾತು

LEAVE A REPLY

Please enter your comment!
Please enter your name here