ಕಾಂಕ್ರೀಟ್ ರಸ್ತೆಗೆ ಗೃಹ ಸಚಿವರಿಂದ ಗುದ್ದಲಿ ಪೂಜೆ

0
327

ರಿಪ್ಪನ್‌ಪೇಟೆ: ಸಮೀಪದ ಹುಂಚ ಹೋಬಳಿ ವ್ಯಾಪ್ತಿಯ ತಳಲೆ-ಕಗ್ಗಲಿ ಸಂಪರ್ಕದ ರಸ್ತೆಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಗುದ್ದಲಿಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಬೇಡಿಕೆ ಇಡುತ್ತಿದ್ದು ಮತದಾರರ ಬೇಡಿಕೆಯನ್ನಾದರಿಸಿ ಗ್ರಾಮದ ಸಂಪರ್ಕ ರಸ್ತೆಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ವಿವರಿಸಿದರು.

(ಫೋಟೋ: ತಳಲೆ ಗ್ರಾಮದ ಕಗ್ಗಲಿಯ ಪುಟ್ಟಸ್ವಾಮಿಗೌಡರು ಮತ್ತು ಮನೆಯರು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರರವರನ್ನು ಸನ್ಮಾನಿಸಿ ಅಭಿನಂದಿಸಿದರು.)

ಹೆದ್ದಾರಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವನಿತಾ ಗಂಗಾಧರ್, ಉಪಾಧ್ಯಕ್ಷೆ ಲೀಲಾವತಿ ಪುಂಡಲೀಕ್, ಗ್ರಾಮದ ಹಿರಿಯ ಮುಖಂಡ ಪುಟ್ಟಸ್ವಾಮಿಗೌಡರು ಮತ್ತು ಕಗ್ಗಲಿ ಶಿವಪ್ರಕಾಶ್‌ಪಾಟೀಲ್, ಯುವರಾಜ್ ಹಾಗೂ ಕಲ್ಲೂರು ನಾಗೇಂದ್ರ,ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಶಿಕ್ಷಕ ವೃಂದ,ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ದಿನೇಶ್‌ಗೌಡರು, ಕಗ್ಗಲಿಲಿಂಗಪ್ಪ ಪಿಡಿಓ ಮತ್ತು ಸಿಡಿಪಿಓ ಇಲಾಖೆಯ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

(ಫೋಟೋ: ತಳಲೆಯ ಸರ್ಕಾರಿ ಶಾಲಾ ಅವರಣದಲ್ಲಿ ಅಂಗನವಾಡಿ ಕಟ್ಟಡವನ್ನು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.)

ಶಾಸಕ ಹರತಾಳು ಹಾಲಪ್ಪನವರಿಗೆ ರಾಮಚಂದ್ರಪುರ ಮಠದ ಶ್ರೀಗಳಿಂದ ಅಶೀರ್ವಾದ :

ರಿಪ್ಪನ್‌ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂ.ಎಸ್.ಐ.ಎಲ್.ಅಧ್ಯಕ್ಷ ಹರತಾಳು ಹಾಲಪ್ಪನವರಿಗೆ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಜಿಗಳವರು ಅಶೀರ್ವದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಅರಗಜ್ಞಾನೇಂದ್ರ,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಲ್ಲಡ್ಕ ಪ್ರಭಾಕರಭಟ್, ಶಾಸಕರಾದ ಸುಕುಮಾರಶೆಟ್ಟಿ ಬೆಳ್ಳಿಪ್ರಕಾಶ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮುಖಂಡರಾದ ದತ್ತಾತ್ರಿ, ಪ್ರಸನ್ನ ಕೆರೆಕೈ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here