ಕಾಂಗ್ರೆಸ್ ತಾಲಿಬಾನ್ ಸಂಸ್ಕೃತಿ ಜನರನ್ನು ಬೆಳೆಸುತ್ತಿದೆ: ಸಿ.ಟಿ. ರವಿ

0
134

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ತಾಲಿಬಾನ್ ಸಂಸ್ಕೃತಿಯ ಜನರನ್ನು ಬೆಳೆಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಸಮಾವೇಶವೊಂದರಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖಂಡರು ಟಿಪ್ಪುವಿನ ವಂಶಸ್ಥರು ತಲೆತಗ್ಗಿಸುವುದಿಲ್ಲ, ತಲೆಕಡಿಯುತ್ತೇವೆಂದು ಹೇಳಿಕೆ ನೀಡಿದ್ದಾರೆ. ಯಾರ ತಲೆಯನ್ನು ಕಡಿಯುತ್ತಾರೆ ಎಂದು ಪ್ರಶ್ನಿಸಿದರು. ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಯಾವ ಪ್ರತಿಕ್ರಿಯೆಯನ್ನು ಕೊಡಲಿಲ್ಲ, ತಾಲಿಬಾನ್ ಮನಸ್ಥಿತಿಯವರನ್ನು ಬೆಂಬಲಿಸುವರೊ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಮೆಡಿಕಲ್ ಕಾಲೇಜು ಉಪನ್ಯಾಸಕರ ಹುದ್ದೆಗೆ ಸಂದರ್ಶನ ನಡೆಯುತ್ತಿದ್ದು, ರೋಸ್ಟರ್ ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಸಂದರ್ಶನದ ವೀಡಿಯೋ ಮಾಡಿಸಲಾಗಿದೆ. ಕೆಲವು ದಲ್ಲಾಳಿಗಳು ಮೆರಿಟ್ ಮೇಲೆ ಆಯ್ಕೆಯಾದವರಿಗೂ ಕೆಲಸ ಕೊಡಿಸುವುದಾಗಿ ಹಣ ಕೇಳುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ಸಂದರ್ಶನಕ್ಕೆ ಹಾಜರಾದವರು ಯಾವುದೇ ಕಾರಣಕ್ಕೂ ಹಣ ನೀಡಲು ಮುಂದಾಗಬಾರದು ಎಂದು ಮನವಿ ಮಾಡಿದರು.

ಯಾರದರೂ ಹಣ ಕೇಳಿದರೆ, ಮಾಧ್ಯಮದವರಿಗೆ, ಜಿಲ್ಲಾಧಿಕಾರಿಗೆ ಅಥವಾ ತಮಗೆ ವಿಷಯ ತಿಳಿಸಬೇಕು ಹಣಕೊಟ್ಟು ಮೋಸ ಹೋಗಬೇಡಿ ಎಂದು ಹೇಳಿದರು.

ಬಿಡ್‌ಕಾಯಿನ್ ಕುರಿತು ಕೇಳಿದಾಗ, ವಿರೋಧ ಪಕ್ಷದ ಮುಖಂಡರ ಬಳಿ ದಾಖಲೆ ಇದ್ದರೆ ಬಿಡುಗಡೆಗೊಳಿಸಲಿ, ನಿಷ್ಪಕ್ಷಪಾತ ತನಿಖೆ ನಡೆಯುತ್ತಿದ್ದು, ಯಾರೇ ಭಾಗಿಯಾಗಿದ್ದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here