ಕಾಂಗ್ರೆಸ್ ಪಕ್ಷದಿಂದ ಕಾಲಸಸಿ ಸತೀಶ್ ಉಚ್ಚಾಟನೆ !

0
1524

ಹೊಸನಗರ : ಕಾಂಗ್ರೆಸ್ ಪಕ್ಷದಿಂದ ಕಾಲಸಸಿ ಸತೀಶ್ ಉಚ್ಚಾಟನೆ ಮಾಡಲಾಗಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಸದಾಶಿವ ಶ್ರೇಷ್ಠಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಅಧ್ಯಕ್ಷ ಗಾದಿಗೆ ಇಂದು ನಡೆದ ಚುನಾವಣೆಯಲ್ಲಿ ಎಂ.ಗುಡ್ಡೆಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಕಾಲಸಸಿ ಸತೀಶ್ ಏಕಾಏಕೀ ಬಿಜೆಪಿ ಪಕ್ಷದ ಅಧ್ಯಕ್ಷ ಗಾದಿಯ ಆಕಾಂಕ್ಷಿ ಸವಿತಾ ರಮೇಶ್ ಅವರಿಗೆ ಮತ ಹಾಕುವ ಮೂಲಕ ಕಾಂಗ್ರೆಸ್ ಪಕ್ಷದ ನಿಯಮಾವಳಿಗೆ ವಿರುದ್ಧ ನಡೆದುಕೊಂಡಿರುವುದು ಪಕ್ಷ ವಿರೋಧಿ ಚಟುವಟಿಕೆ ಆಗಿದೆ.

ಕಳೆದ ಗ್ರಾಪಂ.ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸತೀಶ್ ದಂಪತಿಗಳಿಗೆ ಟಿಕೆಟ್ ನೀಡಿತ್ತು. ಆದರೆ ಪಕ್ಷಕ್ಕೆ ಮಾತೃದ್ರೋಹ ಬಗೆದ ಹಿನ್ನಲೆಯಲ್ಲಿ ತತಕ್ಷಣ ಜಾರಿಗೆ ಬರುವಂತೆ ಕಾಲಸಸಿ ಸತೀಶ್ ಹಾಗೂ ಇನ್ನೋರ್ವ ಸದಸ್ಯೆ ಬೇಬಿ ಅವರನ್ನು ಮುಂಬರುವ ಆರು ವರ್ಷಗಳ ಕಾಲ ಪಕ್ಷ, ತನ್ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here