ಕಾಂಗ್ರೆಸ್ ಪಕ್ಷವು ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದೆ : ಕೆ.ಎಸ್ ಪುಷ್ಪರಾಜ್

0
119

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ಹಾಗೂ ನಗರಸಭಾ ಚುನಾವಣೆಯ ಸತತ ಸೋಲಿನಿಂದ ಕಾಂಗ್ರೆಸ್ ಹತಾಶೆ ಹೇಳಿಕೆ ನೀಡಿದ್ದು ಜಿಲ್ಲೆ ಹಾಗೂ ನಗರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪುಷ್ಪರಾಜ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ‌ ಈ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಯಲ್ಲಿ ಸತತವಾಗಿ 3ನೇ ಬಾರಿಗೆ ನಗರದ ಪ್ರಜ್ಞಾವಂತ, ಪ್ರಬುದ್ಧ ಮತದಾರ ಬಂಧುಗಳು ಅಭಿವೃದ್ಧಿಯ ಕೆಲಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಪಷ್ಟ ಜನಾದೇಶವನ್ನು ಭಾರತೀಯ ಜನತಾ ಪಾರ್ಟಿಗೆ ನೀಡುವುದರ ಮೂಲಕ ಬಿಜೆಪಿಯ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ. 2013 ರಿಂದ 2018 ರವರೆಗೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಎರಡು ಬಾರಿ ಭೇಟಿ ಮಾಡಿ ಅನುದಾನ ಕೋರಿದರು ನಯಾಪೈಸೆಯನ್ನು ಅನುದಾನ ನೀಡಲಿಲ್ಲ ಎಂದ ಹೇಳಿದರು.

ಅಧಿಕಾರದಲ್ಲಿದ್ದಾಗ ಅಭಿವೃದ್ಧಿಯನ್ನು ಮರೆಯುವುದು ಕಾಂಗ್ರೆಸ್‌ನ ಜಾಯಮಾನ ಅಧಿಕಾರವಿಲ್ಲದಿದ್ದಾಗ ನೀರಿನಿಂದ ಹೊರಗೆ ಬಿದ್ದ ಮೀನಿನಂತೆ ಚಡಪಡಿಸುವುದು ಕಾಂಗ್ರೆಸ್‌ನ ಹುಟ್ಟುಗುಣ ಎಂದು ಕಿಡಿಕಾರಿದ್ರು.

ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಕಣ್ಣಿಗೆ ಮಂಕು ಕವಿದಿದೆ ಹಾಗಾಗಿ ನಗರದಲ್ಲಿನ ಅಭಿವೃದ್ಧಿ ಕಾರ್ಯಗಳು ಅವರ ಕಣ್ಣಿಗೆ ಕಾಣಿಸುತ್ತಿಲ್ಲ ಅವರಿಗೆ ಸರಿಯಾದ ನೇತ್ರ ತಜ್ಞರ ಬಳಿ‌ ಚಿಕಿತ್ಸೆ ನೀಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here