ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದ ಅಕ್ರಮವಾಗಿ ಸರ್ಕಾರಿ ಜಾಗಕ್ಕೆ ಬೇಲಿ: ತೆರವುಗೊಳಿಸಿದ ಅರಣ್ಯ, ಕಂದಾಯ ಅಧಿಕಾರಿಗಳು !

0
1610

ಹೊಸನಗರ: ಭಾನುವಾರ ರಾತ್ರಿ ಸುಮಾರು 11 ಗಂಟೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಗಂಗನಕೊಪ್ಪ ಸರ್ವೆನಂಬರ್ 13ರಲ್ಲಿ ಅರಣ್ಯ ಮತ್ತು ಕಂದಾಯ (ಜಂಟಿ ಸರ್ವೆ ಆಗಿಲ್ಲ) ಇಲಾಖೆಗೆ ಸಂಬಂಧಿಸಿದ ಜಾಗಕ್ಕೆ ಸುತ್ತ ತಂತಿ ಬೇಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು ಸೋಮವಾರ ಬೆಳಗ್ಗೆ ಬೇಲಿ ಹಾಕಿರುವುದನ್ನು ಮನಗೊಂಡ ಬಿಜೆಪಿ ಕಾರ್ಯಕರ್ತರು ಸರ್ವೆನಂಬರ್ 13ರಲ್ಲಿ ಉಳಿದ ಜಾಗಕ್ಕೆ ತಂತಿ ಬೇಲಿ ಹಾಕಿ ಇಬ್ಬರು ಹಾಕಿರುವ ಜಾಗವನ್ನು ಮಾವಿನಕೊಪ್ಪದ ನಿವಾಸ ರಹಿತ ಕುಟುಂಬಗಳಿಗೆ ಹಂಚುವ ವ್ಯವಸ್ಥೆ ಮಾಡಲಾಗುವುದು ಈ ಜಾಗ ಮಾವಿನಕೊಪ್ಪದ ಎಲ್ಲ ನಿವಾಸಿಗಳಿಗೆ ಸಂಬಂಧಪಟ್ಟ ಜಾಗವೆಂದು ಮಾವಿನಕೊಪ್ಪದ ಕಾಂಗ್ರೆಸ್ ಬಿಜೆಪಿಯ ಎರಡು ಬಣಗಳು ಒಟ್ಟಾಗಿ ಜಾಗೆ ಉಳಿಸಿಕೊಳ್ಳಲು ಹೋರಾಟ ನಡೆಸಿದರು.

ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಯ ಎಸಿಎಫ್ ಶವಮೂರ್ತಿ ಅರಣ್ಯಾದಿಕಾರಿ ಅದರ್ಶ ಹಾಗೂ ಸಿಬ್ಬಂದಿಗಳು ಕಂದಾಯ ಇಲಾಖೆಯ ರೆವಿನ್ಯೋ ಇನ್ಸ್‌ಪೆಕ್ಟರ್ ವೆಂಕಟೇಶ್ ಮೂರ್ತಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್‌ರವರು ಸ್ಥಳಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಎಸಿಎಫ್ ಶಿವಮೂರ್ತಿಯವರು ಮಾತನಾಡಿ, ಸರ್ಕಾರಿ ಜಾಗವನ್ನು ಈ ರೀತಿ ಸಾರ್ವಜನಿಕರು ಹಂಚಿಕೊಳ್ಳಲು ಬರುವುದಿಲ್ಲ ಅದಕ್ಕೆ ಕಾನೂನುಗಳಿವೆ ಮುಂದಿನ ದಿನದಲ್ಲಿ ಇದು ಕಂದಾಯ ಇಲಾಖೆಯ ಜಾಗವೂ ಅಥವ ಅರಣ್ಯ ಇಲಾಖೆಯ ಜಾಗವೂ ಎಂದು ಜಂಟಿ ಸರ್ವೆ ನಡೆಸಿ ಕಾನೂನಿನ ಅಡಿಯಲ್ಲಿ ಇಲ್ಲಿನ ನಿವಾಸಿಗಳಿಗೆ ಮನೆಯಿಲ್ಲದವರಿಗೆ ಕಂದಾಯ ಜಾಗವಾಗಿದ್ದಲ್ಲಿ ನಿವೇಶನ ಹಂಚಿಕೆ ಮಾಡಲು ಕಂದಾಯ ಇಲಾಖೆಗೆ ತಿಳಿಸುವ ಮೂಲಕ ಈ ಜಾಗವನ್ನು ಕಂದಾಯ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ವರ್ಗಹಿಸಿ ಗ್ರಾಮ ಪಂಚಾಯಿತಿಯಿಂದ ನಿವೇಶನ ರಹಿತರಿಗೆ ನಿವೇಶನ ನೀಡಲು ತಿಳಿಸುತ್ತೇವೆ ಈಗ ಹಾಕಿರುವ ಸರ್ಕಾರಿ ತಂತಿ ಬೇಲಿಯನ್ನು ತೆಗೆಯಲು ಸೂಚಿಸಿದರು ಇಲ್ಲವಾದರೆ ಕಾನೂನಿನ ಅಡಿಯಲ್ಲಿ ಸರ್ಕಾರಿ ಕಾನೂನಿನ ಅಡಿಯಲ್ಲಿ ಆಕ್ರಮ ಭೂ ಕಬಳಿಕೆ ಕೇಸು ಹಾಕಲಾಗುವುದು ಎಂದರು.

ತಂತಿ ಬೇಲಿ ತೆರವು:

ಅಧಿಕಾರಿಗಳ ಮಾತಿಗೆ ಸ್ಪಂದಿಸಿದ ಮಾವಿನಕೊಪ್ಪದ ಸಾರ್ವಜನಿಕರು ಎರಡು ಪಕ್ಷದವರು ಸೇರಿ ಸುಮಾರು 4ಎಕರೆ ಸರ್ಕಾರಿ ಜಾಗವನ್ನು ತೆರವು ಮಾಡಲು ಸಹಕರಿಸಿದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ರೆವಿನ್ಯೋ ಅಧಿಕಾರಿ ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿ ಕೌಶಿಕ್, ಎ.ಸಿ.ಎಫ್ ಶಿವಮೂರ್ತಿ, ಅರಣ್ಯಾಧಿಕಾರಿ ಅದರ್ಶ, ಉಪ ವಲಯಾಧಿಕಾರಿ ಎಂ.ಎಸ್. ದೊಡ್ಡಮನಿ, ಯುವರಾಜ್, ಷಣ್ಮುಖ ಪಾಟೀಲ್ , ಹಾಲೇಶ್ ಸುರೇಶ್, ಮೌನೇಶ್, ಕೃಷ್ಣ, ಸತೀಶ್ ಗ್ರಾಮಸ್ಥರ ಪರವಾಗಿ ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಂದ್ರ, ಬೃಂದಾವನ ಪ್ರವೀಣ್, ದೇವಿಕೃಷ್ಣ, ರಮೇಶ್, ಗೌತಮ್ ಕುಮಾರ ಸ್ವಾಮಿ, ಗೌತಮ್ ಗಣಪತಿ, ಸೈಕಲ್ ಶಾಪ್ ಶ್ರೀನಿವಾಸ್, ಕನಕರಾಜ್ ನಯನ, ಅವಿನಾಶ್, ಜಗದೀಶ, ವೆಂಕಟೇಶ್, ಕೃಷ್ಣಮೂರ್ತಿ, ಮಂಜುನಾಥ್, ದಿನೇಶ್ ಆಚಾರ್ ಆದರ್ಶ, ನವೀನ, ನಾಗರಾಜ್, ಶಿವು, ತಮ್ಮಯ್ಯ, ಚಂದ್ರಭಂಡಾರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here