ಕಾಡಾನೆ ದಾಳಿಗೆ ಒಂದು ಎಕರೆ ಮೆಕ್ಕೆಜೋಳ ಬೆಳೆ ಸರ್ವನಾಶ !!

0
376

ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಕೆಂಚನಹಳ್ಳಿ ಗ್ರಾಮದ ಹೊನ್ನ ಕೆಂಪಯ್ಯ ರೈತರ ಜಮೀನಿನ ಮೇಲೆ ಕಾಡಾನೆಗಳು ದಾಳಿ ನಡೆಸಿದ್ದು ಮೆಕ್ಕೆಜೋಳವನ್ನು ನಾಶಮಾಡಿದೆ. ಬೆಳೆದು ನಿಂತಿದ್ದ ಒಂದುವರೆ ಎಕರೆ ಮೆಕ್ಕೆಜೋಳ ಕಾಡಾನೆ ದಾಳಿಗೆ ಬಲಿಯಾಗಿದ್ದು, ಅರಣ್ಯ ಇಲಾಖೆಯ ಬೇಜವಾಬ್ದಾರಿತನವನ್ನು ಸ್ಥಳೀಯರು ಎತ್ತಿ ತೋರಿಸಿದ್ದಾರೆ.

ಈ ಭಾಗದಲ್ಲಿ ಪದೇಪದೇ ಕಾಡಾನೆಗಳು ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಇವರ ಬೇಜವಾಬ್ದಾರಿತನದಿಂದ ನಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗುತ್ತಿದ್ದೇವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here