24.3 C
Shimoga
Friday, December 9, 2022

ಕಾಡಿಗೆ ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ಯಜಮಾನನ್ನು ಪತ್ತೆ ಹಚ್ಚಿ ಜೀವ ಉಳಿಸಿದ ಶ್ವಾನ !

ರಿಪ್ಪನ್‌ಪೇಟೆ : ಕಾಡಿಗೆ ಸೌದೆ ತರಲು ಹೋದಾಗ ನಿರ್ಜನ ಪ್ರದೇಶದಲ್ಲಿ ಎಚ್ಚರತಪ್ಪಿ ಬಿದ್ದ ವ್ಯಕ್ತಿಯನ್ನ ತಮ್ಮ ಮನೆ ನಾಯಿಯೇ ಪತ್ತೆ ಹಚ್ಚಿದ ಘಟನೆ ಸೂಡೂರು ಗ್ರಾಮದಲ್ಲಿ ನಡೆದಿದೆ.

ಸೂಡೂರು ಗ್ರಾಮ ಶೇಖರಪ್ಪ (50) ಜೀವನಕ್ಕಾಗಿ ಆಯನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದ. ಮೊನ್ನೆ ಬೆಳಗ್ಗೆ 6 ಗಂಟೆಗೆ ಊರಿನ ಸಮೀಪದ ಕಾಡಿಗೆ ಸೌದೆ ತರಲು ಹೋಗಿ, ಅಲ್ಲಿಯೇ ಎಚ್ಚರ ತಪ್ಪಿ ಬಿದ್ದಿದ್ದ. ಎಂದಿನಂತೆ ಶೇಖರಪ್ಪ ಕಾಡಿಗೆ ಹೋದಾಗ 10 ಗಂಟೆಯೊಳಗೆ ಮನೆಗೆ ವಾಪಸ್ ಆಗುತ್ತಿದ್ದರು. ಆದರೆ 11 ಗಂಟೆಯಾದ್ರೂ ಮನೆಗೆ ವಾಪಸ್ ಆಗದಿದ್ದಾಗ ಮನೆಯವರು ಅನುಮಾನಗೊಂಡು ಗ್ರಾಮದ ಕೆಲವರಿಗೆ ವಿಷಯ ತಿಳಿಸಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಜನರು ಶೇಖರಪ್ಪರನ್ನ ಕಾಡಿಗೆ ತೆರಳಿ, ಹುಡುಕಾಟ ನಡೆಸಿದ್ದಾರೆ. ಇವರ ಜೊತೆ ಶೇಖರಪ್ಪ ಸಾಕಿದ್ದ ನಾಯಿ ಕೂಡ ಕಾಡಿಗೆ ಹೋಗಿದೆ. ಗ್ರಾಮಸ್ಥರು ಎಷ್ಟೂ ಹುಡುಕಿದರು ಶೇಖರಪ್ಪ ಕಾಣಿಸಿಲ್ಲ. ಇದರಿಂದ ಗಾಬರಿಯಾಗಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ತನ್ನ ಮಾಲೀಕನನ್ನ ಪತ್ತೆ ಹಚ್ಚಿದ ನಾಯಿ ಅದೇ ಸ್ಥಳಕ್ಕೆ ಗ್ರಾಮಸ್ಥರನ್ನ ಕರೆತಂದಿದೆ. ಶೇಖರಪ್ಪ ಮರದ ಕೆಳಗೆ ಎಚ್ಚರ ತಪ್ಪಿ ಬಿದ್ದಿದ್ದು, ಕಾಣಿಸಿದೆ. ತಕ್ಷಣವೇ ಗ್ರಾಮಸ್ಥರು ಕಾಡಿನಿಂದ ಶೇಖರಪ್ಪನ್ನ ತಂದು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ನಾಯಿಯು ಪ್ರತಿದಿನವೂ ಶೇಖರಪ್ಪರ ಜೊತೆ ಓಡಾಡಿಕೊಂಡೇ ಇರುತ್ತದೆ. ಅವರು ಕಾಡಿಗೆ ಹೋದಾಗಲೂ ನಾಯಿ ಜೊತೆಯಲ್ಲಿರುತ್ತಿತ್ತು. ಹೀಗಾಗಿ ಸಹಜವಾಗಿಯೇ ಶೇಖರಪ್ಪರನ್ನು ನಾಯಿ ಪತ್ತೆ ಹಚ್ಚಿದೆ ಅಂತ ಗ್ರಾಮಸ್ಥರು ಹೇಳಿದ್ದಾರೆ.

ಮಾಲೀಕನನ್ನು ಸಾವಿನ ದವಡೆಯಿಂದ ಪಾರು ಮಾಡಿದ ನಾಯಿಯ ಸ್ವಾಮಿ ನಿಷ್ಠೆಗೆ ಇಡೀ ಸೂಡೂರು ಗ್ರಾಮವೇ ಹರ್ಷ ವ್ಯಕ್ತಪಡಿಸಿ ನಾಯಿಯ ಮೆರವಣಿಗೆ ಮಾಡಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!