ಕಾಡುಕೋಣ ಹಾವಳಿಯಿಂದ ಅಪಾರ ಬೆಳೆ ನಾಶ !

0
321

ಮೂಡಿಗೆರೆ: ಕಳೆದ ಕೆಲವು ದಿನಗಳಿಂದ ಕೊಟ್ಟಿಗೆಹಾರದ ಕೃಷಿಕ ಎ. ಆರ್. ಲೋಬೊರವರ ಕೃಷಿ ತೋಟಕ್ಕೆ ಕಾಡು ಕೋಣಗಳು ಸತತ ದಾಳಿ ಮಾಡಿ ಅಪಾರ ಬೆಳೆ ಹಾನಿ ಮಾಡಿವೆ.

ಕೊಟ್ಟಿಗೆಹಾರದ ಸಮೀಪ ಇರುವ ಒಂದು ಎಕರೆ ಅಡಿಕೆ, ಕಾಳುಮೆಣಸು. ಏಲಕ್ಕಿ ಕಾಫಿ ಬೆಳೆಗಳನ್ನು ತುಳಿದು ದಾಂದಲೇ ನಡೆಸಿವೆ. ಸತತ ಮೂರು ದಿನಗಳ ಕಾಲ ಸುಮಾರು 400 ಫಸಲಿಗೆ ಬರುತ್ತಿರುವ ಹನ್ನೊಂದು ವರ್ಷದ ಅಡಿಕೆ ಮರಗಳನ್ನು ತನ್ನ ಕೊಂಬಿನಲ್ಲಿ ತಿವಿದು ಪುಡಿ ಮಾಡಿವೆ. ಹಾಗೆಯೇ ಏಲಕ್ಕಿ ಕಾಳುಮೆಣಸು, ಕಾಫಿ ಗಿಡೆಗಳನ್ನು ಮುರಿದು ಲಕ್ಷಾಂತರ ರೂ ಬೆಳೆ ಹಾನಿಯಾಗಿದೆ. ಅರಣ್ಯ ಅಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಿದ್ದರೂ ತೋಟ ವೀಕ್ಷಣೆ ಬಂದಿಲ್ಲ ಎಂದು ಅವರು ದೂರಿದ್ದಾರೆ.

ಪರಿಹಾರ ನೀಡಲು ಒತ್ತಾಯ ತೋಟದಲ್ಲಿ ಸತತವಾಗಿ ಕಾಡುಕೋಣಗಳ ಕಾಟ ಹೆಚ್ಚಾಗಿದೆ. ಕಷ್ಟಪಟ್ಟು ಬೆಳೆ ಬೆಳೆದು ಫಸಲಿಗೆ ಬರುವಾಗ ಕಾಡು ಪ್ರಾಣಿಗಳು ಬೆಳೆ ನಾಶ ಮಾಡಿರುವುದು ರೈತರನ್ನು ಕಂಗಾಲಾಗಿಸಿದೆ. ಈಚೆಗೆ ಕಾಡಾನೆ ಕಾಟದ ಜತೆಗೆ ಕಾಡುಕೋಣಗಳ ಕಾಟವು ಹೆಚ್ಚಿದೆ. ಸಂಬಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳಿಂದ ಹಾನಿಯಾದ ತೋಟವನ್ನು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ನೊಂದ ರೈತ ಎ. ಆರ್. ಲೋಬೊ ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here