ಕಾಫಿನಾಡಿನಲ್ಲಿ ಪ್ರಥಮ ಬಾರಿಗೆ ಮಹಿಳಾ ಪೊಲೀಸರ ನೈಟ್ ಗಸ್ತು ಕರ್ತವ್ಯಕ್ಕೆ ನಿರ್ವಹಣೆ

0
338

ಚಿಕ್ಕಮಗಳೂರು: ನಗರದಲ್ಲಿ ಪ್ರಸ್ತುತ ಪುರುಷ ಪೊಲೀಸ್‌ ಪೇದೆಗಳು ರಾತ್ರಿ ಗಸ್ತಿನ ಕರ್ತವ್ಯ ನಿರ್ವಹಿಸುತ್ತಿದ್ದರು ಅದರೆ ಕಳೆದ ವಾರದ ಹಿಂದೆ ಮಹಿಳಾ ಪೇದೆಗಳು ರಾತ್ರಿ ಗಸ್ತು ಕಾರ್ಯ ನಿರ್ವಹಣೆಗೆ ಮಂಗಳವಾರ ರಾತ್ರಿ ಎಎಸ್ಪಿ ಶೃತಿ ಚಾಲನೆ ನೀಡಿದ್ದರೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ, ನಗರ ಠಾಣೆ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 10 ಮಂದಿ ಮಹಿಳಾ ಪೊಲೀಸರು ರಾತ್ರಿ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅವರ ಪರಿಶೀಲನೆಗಾಗಿ 2 ಜನ ಸೇರಿ ಒಟ್ಟು 12 ಮಂದಿ ಮಹಿಳಾ ಪೊಲೀಸರು ನೈಟ್‌ ಬೀಟ್‌ನಲ್ಲಿರಲಿದ್ದಾರೆ.

ಎಸ್ಪಿ ಎಂ. ಎಚ್‌. ಅಕ್ಷಯ್‌ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ನೈಟ್‌ ಬೀಟ್‌ ಮಹಿಳಾ ಪೊಲೀಸ್‌ ತಂಡವನ್ನು ರಚನೆ ಮಾಡಲಾಗಿದೆ. ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಂಡು ಮಹಿಳೆಯರು ಯಾವುದೇ ಅಂಜಿಕೆ, ಆತಂಕವಿಲ್ಲದೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಮುಂದಡಿ ಇಟ್ಟಿದ್ದಾರೆ. ಅವರ ಆತ್ಮ ವಿಶ್ವಾಸದ ಬಲ ಹೆಚ್ಚಿಸಲು ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ

ಇಲಾಖೆಯ ಮೇಲಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ.ನೈಟ್‌ ಬೀಟ್‌ನಲ್ಲಿ ಸುಲಲಿತವಾಗಿ ಕಾರ್ಯ ನಿರ್ವಹಣೆಗೆ ನೂತನ ಆ್ಯಪ್‌ ಒಂದನ್ನು ಬಳಸಿಕೊಂಡಿದ್ದಾರೆ. ಸ್ಮಾರ್ಟ್‌ ಇ – ಬೀಟ್‌ ಎಂಬ (ಆ್ಯಪ್‌) ತಂತ್ರಜ್ಞಾನ ಬಳಸಿಕೊಂಡು ನೈಟ್‌ ಬೀಟ್‌ ಯೋಜನೆ ಅನುಷ್ಠಾನ ಮಾಡಲು ಪೊಲೀಸ್‌ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ.

ಯಾವ ಸಮಯದಲ್ಲಿ ಯಾವ ಮಹಿಳಾ ಪೊಲೀಸರು ಎಲ್ಲಿದ್ದಾರೆ? ಎಲ್ಲಿಗೆ ಹೋಗಿದ್ದಾರೆ? ಏನೇನು ಘಟನೆ ನಡೆಯಿತು ಎಂಬುದನ್ನು ಈ ಆ್ಯಪ್‌ ಮೂಲಕ ಸ್ವಯಂ ಚಾಲಿತವಾಗಿ ಸಂದೇಶ ಕೇಂದ್ರ ಸ್ಥಾನಕ್ಕೆ ರವಾನೆ ಆಗಲಿದೆ. ಇಂತಹ ನೂತನ ತಂತ್ರಜ್ಞಾನ ಬಳಸಿಕೊಂಡು ನೈಟ್‌ ಗಸ್ತಿನ ವ್ಯವಸ್ಥೆ ಮಾಡಲಾಗಿದೆ.

‘ಮಹಿಳಾ ಪೊಲೀಸರನ್ನು ರಾತ್ರಿ ಗಸ್ತಿಗೆ ಬಿಡುವಾಗ ಇಬ್ಬರನ್ನು ಜತೆಗೂಡಿ ಕಳುಹಿಸಲಾಗುವುದು. ಅವರಿಗೆ ವಾಕಿ ಟಾಕಿ, ಲಾಠಿ ಜತೆಗೆ ಶಸ್ತ್ರಾಸ್ತ್ರಗಳನ್ನು ಕೂಡ ನೀಡಲಾಗುವುದು. ದ್ವಿಚಕ್ರ ವಾಹನದಲ್ಲಿ ಇಬ್ಬರು ಮಹಿಳಾ ಪೊಲೀಸರು ಬೈಕಿನಲ್ಲಿ ಸಂಚರಿಸಲಿದ್ದಾರೆ. ತುರ್ತು ಸಂದರ್ಭ ಒದಗಿ ಬಂದಾಗ ಪರಿಸ್ಥಿತಿ ನಿಭಾಯಿಸಲು ಒಬ್ಬರು ಸೂಪರ್‌ ವೈಸರ್‌, ಸಬ್‌ ಇನ್ಸ್‌ಪೆಕ್ಟರ್‌, ಎಎಸ್‌ಐ ಹಾಗೂ ಒಬ್ಬರು ಇನ್ಸ್‌ಪೆಕ್ಟರ್‌ ನಿಯೋಜನೆ ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಶೃತಿ ಮಾಹಿತಿ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here