ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ: ಸಾರ್ವಜನಿಕರಲ್ಲಿ ಭಯದ ವಾತಾವರಣ, ಹುಲಿ ಸೆರೆಹಿಡಿಯಲು ಒತ್ತಾಯ

0
435

ಮೂಡಿಗೆರೆ: ಹುಲಿ ದಾಳಿಗೆ ಮತ್ತೊಂದು ಕರು ಬಲಿಯಾದ ಘಟನೆ ತಾಲ್ಲೂಕಿನ ಹೆಗ್ಗುಡ್ಲುವಿನಲ್ಲಿ ನಡೆದಿದೆ.

ಹೆಗ್ಗುಡ್ಲು ಗ್ರಾಮದ ರತ್ನಮ್ಮನವರ ಸೇರಿದ್ದ ಕರು ಜಮೀನಿನಲ್ಲಿದ್ದಾಗ ಹುಲಿ ದಾಳಿ ಮಾಡಿದೆ.

ಕಳೆದ ಎರಡ್ಮೂರು ವರ್ಷಗಳಿಂದ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ, ಹೆಗ್ಗುಡ್ಲು, ಭಾರತಿ ಬೈಲ್, ಹೊಕ್ಕಳ್ಳಿ, ಕುಂದೂರು, ಮತ್ತಿಕಟ್ಟೆ, ಸುತ್ತಮುತ್ತಲ ಗ್ರಾಮಗಳಲ್ಲಿ ಹಸುಗಳ ಮೇಲೆ ಹುಲಿ ದಾಳಿ ಮಾಡುತ್ತಿರುವ ಘಟನೆ ನಡೆಯುತ್ತಿದೆ.

ಈ ವಿದ್ಯಮಾನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ಆದಷ್ಟು ಬೇಗ ಅರಣ್ಯ ಅಧಿಕಾರಿಗಳು ಹುಲಿ ಸೆರೆ ಹಿಡಿಯದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಎಚ್ಚರಿಕೆ ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here