ಕಾಫಿನಾಡು ಯೋಧನ ಸಾವಿನ ಸುತ್ತ ಹುಟ್ಟಿಕೊಂಡ ಅನುಮಾನಗಳ ಹುತ್ತ !

0
865

ಚಿಕ್ಕಮಗಳೂರು: ಏಪ್ರಿಲ್ 24ರಂದು ರಜೆ ನಿಮಿತ್ತ ಯೋಧ ಗಣೇಶ್, ಸೇನೆಯಿಂದ ಗ್ರಾಮಕ್ಕೆ ಬಂದಿದ್ದು. ಒಂದೂವರೆ ತಿಂಗಳು ಕುಟುಂಬದೊಂದಿಗೆ ಸಮಯ ಕಳೆದು ಜೂನ್ 12ರಂದು ಕರ್ತವ್ಯಕ್ಕೆ ಹಾಜರಾಗಬೇಕಿದ್ದರಿಂದ ಗುರುವಾರವಷ್ಟೇ ಬೆಂಗಳೂರು ಮೂಲಕ ಅಸ್ಸಾಂನ ಗುವಾಹಟಿಗೆ ಹಿಂದಿರುಗಿದರು. ಆದರೆ ದುರಂತ ಅಂದ್ರೆ ಅಸ್ಸಾಂ ತಲುಪುವ ಮೊದಲೇ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ.

ಬಿಹಾರದ ಕಿಶನ್ ಗಂಜ್ ನಲ್ಲಿ ಕಾಫಿನಾಡಿನ ಯೋಧ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಶನಿವಾರ ರಾತ್ರಿ ಯೋಧ ಗಣೇಶ್(36) ಅವರ ಮೃತದೇಹ ಕಿಶನ್ ಗಂಜ್ ರೈಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿದೆ ತಾಲ್ಲೂಕಿನ ಮಸಿಗದ್ದೆ ಗ್ರಾಮದಿಂದ ಬೆಂಗಳೂರು ಮೂಲಕ ಗುವಾಹಟಿಗೆ ಯೋಧ ಗಣೇಶ್ ರೈಲಿನಲ್ಲಿ ಪ್ರಯಾಣಸುತ್ತಿದ ಅವರು ಮಾರ್ಗಮಧ್ಯದಲ್ಲಿ ಅನುಮಾನಸ್ಪದವಾಗಿ ಯೋಧ ಗಣೇಶ್ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶನಿವಾರ ರಾತ್ರಿ ಅಂಬ್ಯುಲೆನ್ಸ್ ಚಾಲಕ ಮಾಡಿದ ಅದೊಂದು ಕರೆ ಕಾಫಿನಾಡಿನ ಯೋಧನ ಕುಟುಂಬಕ್ಕೆ ಆಘಾತವನ್ನು ಉಂಟುಮಾಡಿತು. ಕಿಶನ್ ಗಂಜ್ ರೈಲ್ವೆ ನಿಲ್ದಾಣದಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೇತುವೆ ಬಳಿ ಯೋಧ ಗಣೇಶ್ ಪತ್ತೆಯಾಗಿತ್ತು. ಇದನ್ನ ನೋಡಿದ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ, ಚಾಲಕ ಮೃತದೇಹವನ್ನ ಅಂಬ್ಯುಲೆನ್ಸ್ ನಲ್ಲಿ ಹಾಕಿಕೊಳ್ಳುವಾಗ ಗುರುತಿನ ಚೀಟಿಯೊಂದರಲ್ಲಿ ಮೊಬೈಲ್ ನಂಬರ್ ಪತ್ತೆ ಹಚ್ಚಿ ತಂದೆ ನಾಗಯ್ಯರವರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಿದಾಗ ಯೋಧ ಗಣೇಶ್ ರವರ ತಂದೆ ನಾಗಯ್ಯ ಅವರಿಗೆ ಸರಿಯಾಗಿ ಅರ್ಥವಾಗಿಲ್ಲ. ಆ ಬಳಿಕ ಯೋಧ ಗಣೇಶ್ ರವರ ಮಾವ ಮಾತನಾಡಿದಾಗ ಯೋಧ ಗಣೇಶ್ ಇನ್ನಿಲ್ಲ ಅನ್ನೋ ಸುದ್ದಿ ತಿಳಿದಿದೆ.

ಏಪ್ರಿಲ್ 24ರಂದು ರಜೆ ನಿಮಿತ್ತ ಯೋಧ ಗಣೇಶ್, ಸೇನೆಯಿಂದ ಗ್ರಾಮಕ್ಕೆ ಬಂದಿದ್ದು. ಒಂದೂವರೆ ತಿಂಗಳು ಕುಟುಂಬದೊಂದಿಗೆ ಸಮಯ ಕಳೆದು ಜೂನ್ 12ರಂದು ಕರ್ತವ್ಯಕ್ಕೆ ಹಾಜರಾಗಬೇಕಿದ್ದರಿಂದ ಗುರುವಾರವಷ್ಟೇ (ಜೂನ್ 9) ಬೆಂಗಳೂರು ಮೂಲಕ ಅಸ್ಸಾಂನ ಗುವಾಹಟಿಗೆ ಹಿಂದಿರುಗುತ್ತಿದ್ರು. ಆದರೆ ದುರಂತ ಅಂದ್ರೆ ರೈಲಿನಲ್ಲಿ ಬೆಂಗಳೂರಿನಿಂದ ಬಿಹಾರ ಮೂಲಕ ಅಸ್ಸಾಂ ತಲುಪುವ ಮೊದಲೇ ಯೋಧ ಗಣೇಶ್ ಸಾವನ್ನಪ್ಪಿದ್ದಾರೆ. ಬಿಹಾರದ ಕಿಶನ್ ಗಂಜ್ ರೈಲ್ವೆ ನಿಲ್ದಾಣದ ಲಗೇಜ್ ರೂಂನಲ್ಲಿ ಗಣೇಶ್ ಅವರ ಬ್ಯಾಗ್ ಪತ್ತೆಯಾಗಿವೆ. ಈ ರೇಲ್ವೆ ನಿಲ್ದಾಣದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಗಣೇಶ್ ಅವರ ಮೃತದೇಹ ಸಿಕ್ಕಿದೆ. ಹೋಗುವ ವೇಳೆ ಯೋಧ ಗಣೇಶ್ ಅವರ ಬಳಿ 30 ಸಾವಿರಕ್ಕೂ ಅಧಿಕ ಹಣ ಇತ್ತು, ಈ ಹಣವನ್ನ ನೋಡಿಯೇ ಯಾರಾದ್ರೂ ಗಣೇಶ್ ಅವರ ಪ್ರಾಣಕ್ಕೆ ಕುತ್ತು ತಂದಿರಬಹುದಾ ಅನ್ನೋದು ಸದ್ಯದ ಯಕ್ಷಪ್ರಶ್ನೆಯಾಗಿದೆ.

ಯೋಧ ಗಣೇಶ್ ಕಳೆದ 14 ವರ್ಷದಿಂದ ಸೇನೆಯಲ್ಲಿರುವ 4 CORPS ಸಿಗ್ನಲ್‌ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇನೆ, ದೇಶದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಗಣೇಶ್ ಅವರಿಗೆ ಸೈನಿಕನಾಗಬೇಕು ಅನ್ನೋ ಹಂಬಲ ಚಿಕ್ಕದಾಗಿನಿಂದಲೂ ಇತ್ತು. ಹಾಗಾಗಿಯೇ ಪಿಯುಸಿ ಆಗುತ್ತಲೇ ಸೇನೆಗೆ ಸೇರಿಕೊಂಡು ತನ್ನ ಕನಸನ್ನು ನನಸು ಮಾಡಿಕೊಂಡಿದ್ದರು. ಇನ್ನೂ ಹಲವು ವರ್ಷ ಸೇನೆಯಲ್ಲಿ ಮುಂದುವರಿಯಬೇಕು ಅನ್ನೋ ಮಹತ್ವಕಾಂಕ್ಷೆ ಕಾಫಿನಾಡಿನ ಯೋಧನದ್ದಾಗಿತ್ತು. ಆದ್ರೆ ವಿಧಿ ಮಾತ್ರ ಅದಕ್ಕೆ ಅವಕಾಶ ಕೊಡದೇ ಇರೋದು ನಿಜಕ್ಕೂ ದುರಂತವೇ ಸರಿ.

ನಾಗಯ್ಯ-ಗಂಗಮ್ಮ ದಂಪತಿಯ ಮಗನಾದ ಗಣೇಶ್ ಗೆ 6 ವರ್ಷದ ಹಿಂದೆ ಶ್ವೇತಾ ಎಂಬುವರ ಜೊತೆ ವಿವಾಹವಾಗಿದ್ದು. ದಂಪತಿಗೆ 5 ವರ್ಷದ ಆದ್ಯ ಎಂಬ ಮಗಳಿದ್ದಾಳೆ. ಮೂರು ವರ್ಷದ ಹಿಂದೆ ನಾಗಯ್ಯ-ಗಂಗಮ್ಮ ಮತ್ತೊಬ್ಬ ಮಗ, ಗಣೇಶ್ ಅವರ ಸಹೋದರ ಸಾವನ್ನಪ್ಪಿದ್ದರು. ಸದ್ಯ ಇಡೀ ಕುಟುಂಬಕ್ಕೆ ಗಣೇಶ್ ಅವರೇ ಆಧಾರ ಸ್ತಂಭ ವಾಗಿದ್ದು. ಇದೀಗ ಈ ದುರಂತದಲ್ಲಿ ಕುಟುಂಬಕ್ಕಿದ್ದ ಆಧಾರಸ್ತಂಭವನ್ನೇ ಕಿತ್ತು ಕೊಂಡಿದೆ, ಗಣೇಶ್ ಅವರ ಸಾವಿನ ಸುದ್ಧಿ ತಿಳಿದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗ್ಗೆ ಯೋಧನ ಪಾರ್ಥಿವ ಶರೀರ ತಾಲ್ಲೂಕಿನ ಮಸಿಗದ್ದೆ ಗ್ರಾಮಕ್ಕೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಕರ್ತವ್ಯಕ್ಕೆ ತೆರಳುವ ಮಾರ್ಗಮಧ್ಯೆ ಯೋಧ ಅನುಮಾನಸ್ಪದವಾಗಿ ಸಾವನ್ನಪ್ಪಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದ್ದು, ಈ ಬಗ್ಗೆ ಸೇನೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here