ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿ ನೇರ ಸಬ್ಸಿಡಿ ನೀಡಲಿ: ಬಾಲಕೃಷ್ಣ

0
159

ಮೂಡಿಗೆರೆ: ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿ ನೇರವಾಗಿ ಮತ್ತು ಹೆಚ್ಚಿನ ದರದಲ್ಲಿ ಸಬ್ಸಿಡಿಯನ್ನು ನೀಡಲು ಮುಂದಾಗಬೇಕು ಎಂದು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಹೇಳಿದರು.

ದೆಹಲಿಯಿಂದ ಆಗಮಿಸಿದ ನೀತಿ ಆಯೋಗದ ಸದಸ್ಯರು ಮೂಡಿಗೆರೆ ತಾಲ್ಲೂಕಿನಲ್ಲಿ ಅಧ್ಯಯನ ಪ್ರವಾಸ ಮಾಡುತ್ತಿದ್ದು ಗುರುವಾರ ಬಾಳೂರಿಗೆ ಬೇಟಿ ನೀಡಿದಾಗ ಬಾಳೂರಿನ ಸುವರ್ಣಗಿರಿ ಸಭಾಭವನದಲ್ಲಿ ನಡೆದ ಬಾಳೂರು ಮತ್ತು ಕಳಸ ಭಾಗಕ್ಕೆ ಅಧ್ಯಯನ ಪ್ರವಾಸಕ್ಕೆ ಆಗಮಿಸಿದ ನೀತಿ ಆಯೋಗದ ಸದಸ್ಯರು ಹಾಗೂ ಬಾಳೂರು ಮತ್ತು ಕಳಸ ಕಾಫಿ ಬೆಳೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಫಿ ಬೆಳೆಗಾರರಿಗೆ ಅಗತ್ಯವಾಗಿ ಬೇಕಾಗಿರುವಂತಹ ಕಾಫಿ ಕಣ, ಗೋದಾಮು, ಔಷಧಿ ಸಿಂಪಡಣೆ ಸ್ಪಿಂಕ್ಲರ್ ಉಪಕರಣಗಳು, ಕೆರೆ ಮತ್ತು ರಿ ಪ್ಲಾಂಟಿಂಗ್ ಗೆ ಹೆಚ್ಚಿನ ಸಬ್ಸಿಡಿಯನ್ನು ನೀಡಬೇಕು. ರಾಸಾಯನಿಕ ಗೊಬ್ಬರಕ್ಕೆ ಸರ್ಕಾರ ಹಿಂಪಡೆದಿರುವ ಸಬ್ಸಿಡಿಯನ್ನು ಮರು ನಿಗದಿ ಮಾಡಿ ಕಾಫಿ ಬೆಳೆಗಾರರ ಹಿತ ಕಾಪಾಡಬೇಕು ಎಂದು ನೀತಿ ಆಯೋಗವನ್ನು ಒತ್ತಾಯಿಸಿದರು.

ನೀತಿ ಆಯೋಗದ ಜಂಟಿ ನಿರ್ದೇಶಕ ಡಾ. ಮೀನಲ್ ಶರ್ಮ ಮಾತನಾಡಿ, ಕಾಫಿ ಮಂಡಳಿಯ ಮಹತ್ವವನ್ನು ತಿಳಿಸಲು ನಮ್ಮ ತಂಡ ಈ ಭಾಗಕ್ಕೆ ಭೇಟಿ ನೀಡಿದೆ. ಕಾಫಿ ಮಂಡಳಿಯಿಂದ ಕಾಫಿ ಬೆಳೆಗಾರರಿಗೆ ಸಿಗುವಂತಹ ಅನುಕೂಲತೆಗಳ ಬಗ್ಗೆ ಮತ್ತು ಕಾಫಿ ಬೆಳೆಗಾರರ ಸಮಸ್ಯೆಯನ್ನು ತಿಳಿಯಲು ನಮ್ಮ ತಂಡ ಕಾಫಿ ಬೆಳೆಯುವ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುತ್ತಿದ್ದು ಕಾಫಿ ಬೆಳೆಗಾರರು ಹಾಗೂ ರೈತರನ್ನು ನೇರವಾಗಿ ಬೇಟಿ ಮಾಡಿ ಅವರೊಂದಿಗೆ ಚರ್ಚಿಸಿ ವರದಿ ನೀಡಲಾಗುವುದು ಎಂದರು.

ನೀತಿ ಆಯೋಗದ ಸಹಾಯಕ ನಿರ್ದೇಶಕ ಪುನೀತ್, ಕಾಫಿ ಮಂಡಳಿ ಜಂಟಿ ನಿರ್ದೇಶಕ ತಿಮ್ಮರಾಜು, ಸಂಶೋಧನ ನಿರ್ದೇಶಕ ತಸ್ಲಿಮ್ ಮಹಮ್ಮದ್, ಮೂಡಿಗೆರೆ ಹಿರಿಯ ಸಂಪರ್ಕಾಧಿಕಾರಿ ಮಹಮ್ಮದ್ ಆಸೀಪ್, ಕಳಸ ಕಾಫಿ ಮಂಡಳಿ ವಿಸ್ತರಣಾಧಿಕಾರಿ ಎಚ್. ಬಿ. ಜೋಷಿ, ಕಾಫಿ ಬೆಳೆಗಾರರಾದ ಜಗದೀಶ್‍ಗೌಡ, ಕೆ. ಸಿ. ಮಹೇಂದ್ರ, ಬಿ. ಬಿ. ರಮೇಶ್, ಅವಿನ್ ರೋಡ್ರಿಗಸ್, ಪರೀಕ್ಷಿತ್ ಜಾವಳಿ, ಶಶಿಧರ್, ಗಿಲ್ಬರ್ಟ್ ಲೋಬೊ, ಚನ್ನಕೇಶವಗೌಡ, ರವಿ ಡಿಸೋಜ, ಎಂ. ಎಂ ರವಿ, ಶರಣ್, ಪೀಟರ್ ಡಿಸೋಜ, ಉದಯ್, ನರೇಶ್, ಸುದೀರ್ ಮೇಗೂರು, ಆದರ್ಶ್ ತರುವೆ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here