ಕಾಫಿ ಬೆಳೆಹಾನಿ ಕುರಿತು ಜಂಟೀ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಒತ್ತಾಯ

0
191

ಚಿಕ್ಕಮಗಳೂರು: ಅತೀವೃಷ್ಠಿಯಿಂದಾಗಿ ಸಂಭವಿಸಿರುವ ಕಾಫಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದ್ದು, ವರದಿ ಸಿದ್ಧಪಡಿಸಿ ಸರ್ಕಾರಗಳಿಗೆ ಸಲ್ಲಿಸಿ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ತಿಳಿಸಿದರು.

ನಗರದ ಆದ್ರಿಕ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ನಡೆದ ಕರ್ನಾಟಕ ಪ್ಲಾಂರ‍್ಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದರು.

ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಾಫಿ ಮಂಡಳಿ ಸೇರಿ ಜಂಟೀ ಸಮೀಕ್ಷೆಯನ್ನು ಈಗಾಗಲೇ ಆರಂಭಿಸಲಾಗಿದೆ. ನಿನ್ನೆ ಹಾಸನ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ನಡೆದಿದೆ. ಇಂದು ಚಿಕ್ಕಮಗಳರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಲವು ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡಿ ಬಂದಿದ್ದಾರೆ ಎಂದರು. ಸಮೀಕ್ಷೆಯಿಂದ ಸಿಗುವ ಎಲ್ಲಾ ಮಾಹಿತಿಗಳನ್ನು ಕ್ರೂಢೀಕರಿಸಿ ಕಾಫಿ ಬೆಳೆಯುವ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಸರ್ಫೇಸಿ ಕಾಯ್ದೆ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಇಂದಿನ ಕಷ್ಟದ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಸರ್ಫೇಸಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆತಂವೂ ಬೆಳೆಗಾರರನ್ನು ಕಾಡುತ್ತಿದೆ. ನಮಗೆ ಬ್ಯಾಂಕುಗಳು ಕೃಷಿ ಸಾಲವನ್ನೇ ನೀಡಿದೆ. ಈ ಬಗ್ಗೆ ನಾವೂ ಸಹ ಈ ಕರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆಯನ್ನು ಕೇಳಿದ್ದೇವೆ ಎಂದರು.

ಕೇಂದ್ರ ಇನ್ನೂ ಕಾಫಿ ಸಾಲಗಳು ಕೃಷಿಯದ್ದೋ ಅಥವಾ ಕೈಗಾರಿಕಾ ಸಾಲವೋ ಎನ್ನುವುದನ್ನು ಇನ್ನೂ ಸ್ಪಷ್ಟ ಪಡಿಸಿಲ್ಲ. ಈ ವಿಚಾರದಲ್ಲಿ ನಾವು ಗಂಭೀರವಾಗಿ ಸರ್ಕಾರದ ಜೊತೆ ವ್ಯವಹರಿಸುತ್ತೇವೆ ಎಂದು ತಿಳಿಸಿದರು.

ಬ್ಯಾಂಕ್ ನವರ ಜೊತೆಗೂ ನಾವು ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ. 60 ರಿಂದ 70 ವರ್ಷಗಳಿಂದ ಬೆಳೆಗಾರರು ಬ್ಯಾಂಕ್‌ಗಳ ಜೊತೆ ವ್ಯವಹಾರ ಮಾಡುತ್ತಿದ್ದಾರೆ. ಈಗ ನಾಲ್ಕೈದು ವರ್ಷಗಳಿಂದ ಅತೀವೃಷ್ಠಿ, ಬರದಿಂದ ಸಾಕಷ್ಟು ಹಾನಿ ಸಂಭವಿಸಿದೆ. ಕೋವಿಡ್ ಸಂದರ್ಭದಲ್ಲೂ ಕಾರ್ಮಿಕರು ಬಂದು ಹೋಗುವುದಕ್ಕೆ ನಿರ್ಬಂಧ ಇತ್ತು. ಜನವರಿಯಿಂದ ಮಾರ್ಚ್ ವರೆಗೆ ಕಾಫಿ ಕೊಯ್ಲು ಇನ್ನಿತೆರೆ ಸಂಸ್ಕರಣೆ ಕಾರ್ಯಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಕಾರ್ಮಿಕರು ಸಿಗದೆ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎಂದು ತಿಳಿಸಿದರು.

ಈ ವರ್ಷ ಅಕಾಲಿಕ ಮಳೆಯಿಂದ ಭಾರೀ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಎಲ್ಲದರ ಬಗ್ಗೆ ಸರ್ಕಾರದ ಜೊತೆ ಮಾತನಾಡಿ, ಮಂಡಳಿಯಿಂದಲೂ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಒಂದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಮಳೆಯಿಂದಾಗಿ ಉದುರಿದ ಕಾಫಿಯನ್ನು ಒಣಗಿಸಲು ಸಹ ಆಗದ ಸ್ಥಿತಿ ಇದೆ. ಅವರಿಗೆ ಡ್ರೈಯರ್‌ಗಳಿಗೆ ಸಹಾಯಧನ ನೀಡುವ ಬಗ್ಗೆ ಮಂಡಳಿ ತೀರ್ಮಾನ ಮಾಡಿದೆ.

ಕೆಪಿಎ ಅಧ್ಯಕ್ಷ ಎಸ್. ಅಪ್ಪಾದೊರೈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಫಿ ಉದ್ಯಮ ಅತ್ಯಂತ ಗಂಭೀರವಾದ ಆರ್ಥಿಕ ಸಂಕಷ್ಠವನ್ನು ಎದುರಿಸುತ್ತಿದೆ. 2015 ರಿಂದ 2017 ರ ವರೆಗೆ ಬರ ಪರಿಸ್ಥಿತಿ ಇತ್ತು. ಕಾಫಿಗೆ ಹೂಮಳೆ ಮುಖ್ಯ. ಬರದಿಂದಾಗಿ ಅದು ಕೈಕೊಟ್ಟು ಇಳುವರಿ ಸಾಕಷ್ಟು ಕುಂಠಿತಗೊಂಡಿತ್ತು. 2018 ರಿಂದ 2021 ರಲ್ಲೂ ಅಕಾಲಿಕವಾಗಿ ಭಾರೀ ಮಳೆಯಾಗಿರುವುದರಿಂದ ಶೇ. 30 ಕ್ಕೂ ಹೆಚ್ಚು ಕಾಫಿ ನಷ್ಟವಾಗಿದೆ ಎಂದು ಹೇಳಿದರು.

ಬ್ಯಾಂಕುಗಳು ಸಾಲವನ್ನು ಮರು ಹೊಂದಾಣಿಕೆ ಮಾಡುವ ಬದಲು ಸರ್ಪೇಸಿ ಕಾಯ್ದೆಯನ್ನು ಬಳಸಿ ಸಾಲ ವಸೂಲಾತಿಗೆ ಮುಂದಾಗಿರುವುದು ಸರಿಯಲ್ಲ. ಈ ಕುರಿತು ಕೇಂದ್ರದ ವಿತ್ತ ಸಚಿವರು, ವಾಣಿಜ್ಯ ಸಚಿವರುಗಳಿಗೆ ಮನವಿ ಸಲ್ಲಿಸಿ ಕಾಫಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಶೇ. 6ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಫೇಸಿ ಕಾಯ್ದೆ ಪ್ರಕಾರ ಕಾಫಿ ಸಾಲ ವಸೂಲಿಗೆ ಕ್ರಮ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ಬ್ಯಾಂಕ್‌ಗಳಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇದೇ ವೇಳೆ ಬಿಳಿ ಕಾಂಡಕೊರಕದ ಹಾವಳಿಯಿಂದ ಅರೆಬಿಕಾ ತೋಟಗಳು ನಾಶವಾಗುತ್ತಿದೆ. ಕಾಫಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದೆಲ್ಲದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.

ಕಾಫಿ ಬೆಳೆಯುವ ಮೂರೂ ಜಿಲ್ಲೆಗಳಲ್ಲಿ ಆನೆಗಳ ಕಾಟ ತೀವ್ರವಾಗಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ಕಾರ್ಮಿಕರು, ಮಾಲೀಕರು ಜೀವ ಕಳೆದುಕೊಂಡಿದ್ದಾರೆ. ಇದಕ್ಕ ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

ಸಭೆಗೆ ಮುಖ್ಯ ಅತಿಥಿಗಳಾಗಿ ಕಾಫಿ ಮಂಡಳಿ ಸಿಇಓ ಡಾ. ಕೆ. ಜಿ. ಜಗದೀಶ್, ಕೆಪಿಎ ಕಾರ್ಯದರ್ಶಿ ಅನಿಲ್ ಸವೂರ್ ಸೇರಿದಂತೆ ಕಾಫಿ ಬೆಳೆಯುವ ಮೂರೂ ಜಿಲ್ಲೆಗಳ ಕೆಪಿಎ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here