ಕಾಮಗಾರಿ ಪ್ರಯುಕ್ತ ಏ.01 ರಿಂದ 20 ರವರೆಗೆ ವಿದ್ಯುತ್ ನಿಲುಗಡೆ: ಎಲ್ಲಿ?

0
634

ಚಿಕ್ಕಮಗಳೂರು: ಚಿಕ್ಕಮಗಳೂರು ಉಪವಿಭಾಗ-1 ಮತ್ತು 2 ರ ವ್ಯಾಪ್ತಿಯಲ್ಲಿ ಬರುವ ಚಿಕ್ಕಮಗಳೂರು 66/11 ಕೆವಿ ವಿವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಪ್ರದೇಶಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಾಗೂ ಲಕ್ಯಾ ಇಂಡಸ್ಟ್ರೀಯಲ್ ಪ್ರದೇಶಕ್ಕೆ 11 ಕೆ.ವಿ ಲಿಂಕ್ ಲೈನ್ ನಿರ್ಮಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಏಪ್ರಿಲ್ 01 ರಿಂದ ಏಪ್ರಿಲ್ 20 ರವರೆಗೆ ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5 ಗಂಟೆಯವರೆಗೆ ದಿನ ಬಿಟ್ಟು ದಿನ ವಿದ್ಯುತ್ ವ್ಯತ್ಯಯವಾಗಲಿದೆ.

66/11ಕೆ.ವಿ ಚಿಕ್ಕಮಗಳೂರು ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ ಫೀಡರ್‌ಗಳಿಗೆ ಒಳಪಡುವ ಪ್ರದೇಶಗಳಾದ ಜೋತಿ ನಗರ, ಕುಪ್ಪೇನಹಳ್ಳಿ, ಎ.ಪಿ.ಎಂ.ಸಿ, ಶಶಿಧರ್ ಲೇಔಟ್, ಎ.ಐ,ಟಿ ವೃತ್ತ ಬಳಿ ಹೌಸಿಂಗ್ ಬೋರ್ಡ್ ಮತ್ತು ಲಕ್ಯಾ ಕ್ರಾಸ್ ಇಂಡಸ್ಟ್ರೀಯಲ್ ಪ್ರದೇಶದ ವ್ಯಾಪ್ತಿಗೆ ಬರುವ ವಿದ್ಯುತ್ ಸ್ಥಾವರಗಳಿಗೆ ಹಾಗೂ ಜಯನಗರ, ವಿಜಯನಗರದ ಸ್ವಲ್ಪ ಭಾಗ ತೇಗೂರು ರಸ್ತೆ, ನಲ್ಲೂರು ಗೇಟ್, ಗವನಹಳ್ಳಿ, ರಾಂಪುರ, ಶ್ರೀನಿವಾಸ ನಗರ, ತೇಗೂರು ಗ್ರಾಮಗಳಿಗೆ ಮೇಲ್ಕಾಣಿಸಿದ ದಿನದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here