ಕಾಮಗಾರಿ ಹಂತದಲ್ಲೇ ಕಿತ್ತು ಹೋದ ಬರುವೆ ಬಡಾವಣೆಯ ಕಾಂಕ್ರೀಟ್ ರಸ್ತೆ !

0
179


ರಿಪ್ಪನ್‌ಪೇಟೆ: ಎಂ.ಎಲ್.ಸಿ ಆರ್.ಪ್ರಸನ್ನಕುಮಾರ ಅವಧಿಯಲ್ಲಿ ರಿಪ್ಪನ್‌ಪೇಟೆ ಹೊಸಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಸರ್ಕಾರದಿಂದ ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಹಂತದಲ್ಲೇ ಸಂಪೂರ್ಣ ಕಿತ್ತು ಹೋಗಿ ಸಾರ್ವಜನಿಕರಲ್ಲಿ ಹಾಸ್ಯದ ವಿಷಯವಾಗಿ ಸುದ್ದಿಗೆ ಗ್ರಾಸವಾಗಿದೆ.


ಶೇ. 40 ಪರ್ಸೆಂಟ್‌ನ ರಾಜ್ಯ ಬಿಜೆಪಿ ಸರ್ಕಾರ ಎಂದು ಬೀಗುತ್ತಿರುವ ವಿರೋಧ ಪಕ್ಷದವರು ತಮ್ಮ ಪಕ್ಷದ ಆಗಿನ ಎಂ.ಎಲ್.ಸಿ ಅನುದಾನದಡಿ ಬಿಡುಗಡೆ ಮಾಡಲಾದ ಹೊಸಬಡಾವಣೆಯ ಕಾಂಕ್ರೀಟ್ ರಸ್ತೆ ಕಾಮಗಾರಿ ಅಪೂರ್ಣ ಮತ್ತು ಕಳಪೆ ಗುಣಮಟ್ಟದಿಂದಾಗಿ ಸಂಪೂರ್ಣ ಕಿತ್ತು ಹೋಗಿದೆ.
ಹೊಸಬಡಾವಣೆಯಲ್ಲಿನ ನಿವಾಸಿಗಳಾದ ಗಂಗಾಧರ, ಸುರೇಂದ್ರ ಶೆಟ್ಟಿ ಇನ್ನಿತರರು ಕಾಮಗಾರಿ ಹಂತದಲ್ಲಿಯೇ ಕಿತ್ತು ಹೋಗಿರುವ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಮತ್ತು ಕ್ಯೂರಿಂಗ್ ಸಹ ಮಾಡಿರುವುದಿಲ್ಲ ಎಂದು ತಮ್ಮ ಆಕ್ರೊಶವನ್ನು ವ್ಯಕ್ತಪಡಿಸಿ, ಗ್ರಾಮ ಪಂಚಾಯ್ತಿ ಪಿಡಿಓ ಮತ್ತು ಗ್ರಾಮಾಧ್ಯಕ್ಷರ ಗಮನಕ್ಕೆ ತರಲಾಗಿದ್ದು ಅದು ನಮ್ಮ ವ್ಯಾಪ್ತಿಗೆ ಬರದು ಈ ಹಿಂದಿನ ಎಂ.ಎಲ್.ಸಿ. ಆರ್.ಪ್ರಸನ್ನ ಕುಮಾರ್ ಅನುದಾನದಡಿ ಕಾಮಗಾರಿ ನಿರ್ವಹಿಸಿರುವುದು ಎಂದು ಹೇಳಿ ಸಾಗ ಹಾಕುತ್ತಿದ್ದಾರೆ. ಕಾಮಗಾರಿ ಮಾಡಿ ತಿಂಗಳಲ್ಲಿ ಕಿತ್ತು ಹೋಗಿರುವುದು ಸಾರ್ವಜನಿಕರ ಮತ್ತು ಬಡಾವಣೆಯ ನಿವಾಸಿಗಳಲ್ಲಿನ ಆಕ್ರೋಶಕ್ಕೆ ಕಾರಣವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here