ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜರುಗಿದ ಸಂಭ್ರಮದ ಪ್ರಾಯಶ್ಚಿತ್ತ ಹೋಮ ಹಾಗೂ ಸಹಸ್ರ ಕುಂಭಾಭಿಷೇಕ ; ಕಣ್ಮನ ತುಂಬಿಕೊಂಡ ಭಕ್ತವೃಂದ

0
425

ಹೊಸನಗರ : ತಾಲೂಕಿನ ಶ್ರೀ ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅದ್ದೂರಿಯ ಪ್ರಾಯಶ್ಚಿತ್ತ ಹೋಮ ಹಾಗೂ ಸಹಸ್ರ ಕುಂಭಾಭಿಷೇಕ ಕಾರ್ಯಕ್ರಮ ಸಂಭ್ರಮ ಉಲ್ಲಾಸದಿಂದ ಇಂದು ಸಂಪನ್ನಗೊಂಡಿತು.

ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀ ಗಣಪತಿ ಪೂಜೆ, ಪುಣ್ಯ ವಾಚನ, ಗಣಹೋಮ, ಮಂಡಲ ರಚನೆ, ಸಂಜೆ ಕಲಶಸ್ಥಾಪನೆ ಪೂಜೆ ಹಾಗೂ ಇಂದು ಬೆಳಿಗ್ಗೆ ಪ್ರಾಯಶ್ಚಿತ ಹೋಮ ಹಾಗೂ ಸಹಸ್ರ ಕುಂಭಾಭಿಷೇಕ ಅದ್ದೂರಿಯಾಗಿ ನೆರವೇರಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಶಕ್ತಿ ಪ್ರಭಾಕರ್ ವ್ಯವಸ್ಥಾಪನ ಸಮಿತಿಯವರು ಹಾಗೂ ಅಪಾರ ಭಕ್ತ ವೃಂದದವರು ಪಾಲ್ಗೊಂಡಿದ್ದರು.

ಮೇ ಒಂದರಿಂದ ಐದರವರೆಗೆ ಶ್ರೀ ಕ್ಷೇತ್ರದಲ್ಲಿ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ರಥೋತ್ಸವವು ನಡೆಯಲಿದೆ.

ಮೇ ಮೂರರ ಮಂಗಳವಾರ ಅಷ್ಟೋತ್ತರ ಶತಾಧಿಕ ಏಕಸಹಸ್ರ ನಾಳಿಕೇರ ಶ್ರೀ ಗಣಪತಿ ಹವನ ಹಾಗೂ ರಜತ ರಥೋತ್ಸವ ಮೇ ನಾಲ್ಕರ ಬುಧವಾರ ಶ್ರೀಮನ್ ಮಹಾ ರಥೋತ್ಸವ ನಡೆಯಲಿದೆ.

ಶ್ರೀ ಮನ್ಮಹಾರಥೋತ್ಸವ ಮಧ್ಯಾಹ್ನ 12:00 ಗಂಟೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ವಿವಿಧ ವಾದ್ಯಗಳೊಂದಿಗೆ ಸಿದ್ಧಿವಿನಾಯಕ ದೇವಸ್ಥಾನ ಕಾರಣಗಿರಿ ವೃತ್ತದವರೆಗೆ ರಥೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿಯವರು ತಿಳಿಸಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here