ಹೊಸನಗರ: ತಾಲ್ಲೂಕಿನ ರಾಮಚಂದ್ರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 50 ವರ್ಷಗಳಿಂದ ಶ್ರೀ ಸಿದ್ಧಿವಿನಾಯಕ ಯುವಕ ಸಂಘದವರು ಸಾಂಸ್ಕೃತೀಕ ಕಲೆಗಾಗಿ ಹಾಗೂ ಯುವಕರಿಗೆ ಆಟವಾಡಲು ಇರಿಸಿಕೊಂಡಿರುವ ಜಾಗವನ್ನು ಅತಿಕ್ರಮಿಸಿದ್ದಾರೆ ತಕ್ಷಣ ಖುಲ್ಲ ಮಾಡಿಕೊಡಬೇಕೆಂದು ಯುವಕ ಸಂಘದ ಅಧ್ಯಕ್ಷರಾದ ವಿನಾಯಕರವರ ನೇತೃತ್ವದಲ್ಲಿ ತಾಲ್ಲೂಕು ಕಛೇರಿ ಆವರಣದಲ್ಲಿ ಹೊಸನಗರದ ತಹಶೀಲ್ದಾರ್ ವಿ.ಎಸ್ ರಾಜೀವ್ರವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಖಾಲಿ ಮಾಡಿಕೊಡದಿದ್ದರೇ ಆ ಜಾಗದಲ್ಲಿ ಕಾರಣಗಿರಿಯ ಸಾರ್ವಜನಿಕರು ಹಾಗೂ ಯುವಕರು ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ವರುಣರವರು, ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಜಾಗ ಮತ್ತು ಅರಣ್ಯ ಜಾಗವನ್ನು ಬಲಾಢ್ಯರು ಕಬಳಿಸುತ್ತಿದ್ದು ಇತ್ತೀಚೆಗೆ ಸಂಘ ಸಂಸ್ಥೆಗಳಿಗೆ ಮೀಸಲಿಟ್ಟ ಜಾಗವನ್ನು ಬಿಡುತ್ತಿಲ್ಲ ಹೀಗೆ ಮುಂದುವರೆದರೆ ಕಾಡು ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಈ ಯುವಕ ಸಂಘದ ಜಾಗದಲ್ಲಿ ಪತ್ರಿನಿತ್ಯ ಯುವಕರು ಆಟವಾಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಜಾಗವಾಗಿದೆ ಆದರೆ ಇಂಥಹ ಜಾಗವನ್ನೇ ಅತಿಕ್ರಮಿಸಿದ್ದು ತಕ್ಷಣ ತಹಶೀಲ್ದಾರ್ ಸ್ಪಂದಿಸಿ ಯುವಕ ಸಂಘದ ಜಾಗವನ್ನು ಬಿಡಿಸಿಕೊಡಬೇಕು ಹಾಗೂ ಈ ಜಾಗವನ್ನು ಯುವಕರ ಆಟೋಟಗಳಿಗೆ ರಂಗಮಂದಿರ ಕಟ್ಟಲು ಜಾಗವನ್ನು ಕಂದಾಯ ಇಲಾಖೆಯಿಂದ ಮಂಜೂರಾತಿ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಪಿಲ ಸುಬ್ರಮಣ್ಯ, ಖಜಾಂಚಿ ಸ್ವಸ್ತಿಕ್, ಯುವಕ ಸಂಘದ ಸದಸ್ಯರಾದ ವರುಣ, ಯುವಕ ಸಂಘದ ಉಪಾಧ್ಯಕ್ಷ ಸಂತೋಷ್, ರಕ್ಷಿತ್, ನಂದ, ಸಂತೋಷ, ಸಂಪತ್ ಕುಮಾರ್, ಹರೀಶ, ಯುವಕ ಸಂಘದ ಹಿರಿಯರಾದ ಮಂಜುನಾಥ್ ಅಡಿಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Related