ಕಾರು ಖರೀದಿ ಮಾಡಿ ಮನೆ ತಲುಪುವ ಮುನ್ನವೇ ಆಗುಂಬೆ ಘಾಟಿಯಲ್ಲಿ ಸುಟ್ಟು ಭಸ್ಮ!

0
30134

ತೀರ್ಥಹಳ್ಳಿ : ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಆಗುಂಬೆ ಘಾಟಿಯ ಮೊದಲನೆ ತಿರುವಿನಲ್ಲಿ ನಡೆದಿದೆ.

ಕಾರ್ಕಳದಿಂದ ಶಿವಮೊಗ್ಗದ ಕಡೆ ಹೊರಟಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಿನಲ್ಲಿದ್ದ ಮೂವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗದ ಅರವಿಂದ್ ಎಂಬುವವರು ಕಾರ್ಕಳದಲ್ಲಿಂದು ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರು ಇದಾಗಿದ್ದು ಶಿವಮೊಗ್ಗಕ್ಕೆ ತರುತ್ತಿದ್ದರು. ಮನೆ ತಲುಪುವ ಮುನ್ನವೇ ಮಾಲಿಕನ ಕಣ್ಣೆದುರೆ ಸುಟ್ಟು ಕರಕಲಾಯಿತು.

ಮನೆ ತಲುಪುವ ಮುನ್ನವೇ ಮಾಲಿಕನ ಕಣ್ಣೆದುರೆ ಸುಟ್ಟು ಕರಕಲಾಯಿತು.

ಈ ಘಟನೆಯಿಂದ ಆಗುಂಬೆ ಘಾಟಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಗುಂಬೆ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಾಹಿರಾತು

LEAVE A REPLY

Please enter your comment!
Please enter your name here