ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ: ಚಾಲಕ ಸ್ಥಳದಲ್ಲೇ ಸಾವು !

0
12121

ಹೊಸನಗರ: ತಾಲೂಕಿನ ಬಾಣಿಗ ಸಮೀಪದ ಹೊಸಕೆಸರೆ – ದರೋಡೆಕಾನ್ (ಕೇಶವಪುರ) ನಡುವೆ ಲಾರಿ ಮತ್ತು ಕಾರಿನ ಮಧ್ಯೆ ತಡರಾತ್ರಿ 10.30 ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಕಾರಿನ ಚಾಲಕ ಸಾವಿಗೀಡಾಗಿದ್ದಾರೆ.

ಮೃತನನ್ನು ಶ್ರೀರಾಮ್ ಫೈನಾನ್ಸ್ ಉದ್ಯೋಗಿ ಕಾಳಿಕಾಪುರ ನಿವಾಸಿ ವಿನಯ್ ಗೌಡ (24) ಎಂದು ತಿಳಿದುಬಂದಿದೆ.

ರಾತ್ರಿ 10:30 ರ ಸಮಯದಲ್ಲಿ ಬಾಣಿಗದಿಂದ ಊಟ ಮುಗಿಸಿ ಸಾಗರಕ್ಕೆ ವಾಪಾಸು ತೆರಳುತ್ತಿರುವಾಗ ಎದುರಿನಿಂದ ಭತ್ತ ತುಂಬಿಕೊಂಡು ಬಂದ ಲಾರಿ ವಿನಯ್ ಗೌಡನ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ವಿನಯ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು ಭತ್ತದ ಚೀಲಗಳು ಹೆದ್ದಾರಿ ಮೇಲೆ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಈ ಘಟನೆ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here