ಕಾರ್ತಿಕ ದೀಪೋತ್ಸವ ಬೆಡಗು | ಸರ್ವರಿಗೂ ಜ್ಞಾನಜ್ಯೋತಿ ಬೆಳಗುವಂತಾಗಲಿ : ಹೊಂಬುಜ ಶ್ರೀ

0
180

ರಿಪ್ಪನ್‌ಪೇಟೆ: ಸಮೀಪದ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಕಾರ್ತಿಕಮಾಸದ ಲಕ್ಷದೀಪೋತ್ಸವವು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಸಾನಿಧ್ಯದಲ್ಲಿ ಸಾಂಗವಾಗಿ ಜರುಗಿತು. ಮಠದ ಸುತ್ತಮುತ್ತಲಿನ ಎಲ್ಲಾ ಪರಿಸರವು ಬೆಳಕಿನದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.

ಮಹಾಪುರುಷರ ಜೀವನ ದೀಪವಿದ್ದಂತೆ. ತಾನು ಬೆಳಗುವ ಮೂಲಕ ಪರಿಸರವನ್ನು ಬೆಳಗಿಸುತ್ತಾರೆ. ಮಹಾವೀರ ಬುದ್ಧ ಮುಂತಾದ ಮಹಾಪುರುಷರು ತಮ್ಮ ವ್ಯಕ್ತಿತ್ವದ ಮೂಲಕ ಜ್ಞಾನ-ಪಿಪಾಸುಗಳ ಮನದಲ್ಲಿ ಸದಾ ಪ್ರಜ್ವಲಿಸುತ್ತಿರುತ್ತಾರೆ. ಅವರ ಪ್ರತಿಯೊಂದು ವಾಕ್ಯಗಳು ನಮ್ಮ ಅಜ್ಞಾನದ ಸೆಲೆಯನ್ನು ದೂರಮಾಡಲು ಸಾಧ್ಯ.

ಬಹುರೂಪದಲ್ಲಿ ತುಪ್ಪದ ಹಣತೆಯ ಹಚ್ಚಿ ಕತ್ತಲೆಯನ್ನು ದೂರವಾಗಿಸಲು ನಮ್ಮ ಪ್ರಯತ್ನ ನಡೆದುಬಂದಿದೆ. ಬಹಿರಂಗದಲ್ಲಿ ಕತ್ತಲೆ, ಅಂತರಂಗದಲ್ಲಿ ಮಾಡುವ ಜ್ಞಾನಜ್ಯೋತಿಯ ಮುಂದೆ ಏನನ್ನು ಮಾಡಲಾರದು. ಸರ್ವರಿಗೂ ಜ್ಞಾನಜ್ಯೋತಿ ಬೆಳಗುವಂತಾಗಲೆಂದು ಶುಭಹಾರೈಸಿದರು. ನಂತರ ಊರ-ಪರವೂರ ಭಕ್ತಾದಿವೃಂದದವರು ರಾಜಬೀದಿಯಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here