Home Kalasa ಕಾಲು ಜಾರಿ ನದಿಗೆ ಬಿದ್ದು ದೇವರ ದರ್ಶನಕ್ಕೆ ಬಂದಿದ್ದ ಯುವಕ ಸಾವು !
ಕಳಸ: ಹೆಬ್ಬಾಳೆ ಬಳಿ ಭದ್ರಾ ನದಿಯಲ್ಲಿ ಯುವಕನೋರ್ವ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಚಿತ್ರದುರ್ಗದ ಅಶೋಕ್ (19) ಮೃತಪಟ್ಟ ಯುವಕ. ಅಶೋಕ್ ತನ್ನ ಕುಟುಂಬದವರ ಜೊತೆ ಹೊರನಾಡು ಅನ್ನಪೂರ್ಣೇಶ್ವರಿ ದೇವರ ದರ್ಶನಕ್ಕೆ ಬಂದಿದ್ದು ದೇವಸ್ಥಾನಕ್ಕೆ ಹೋಗುವ ದಾರಿ ಮಧ್ಯೆ ಹೆಬ್ಬಾಳೆ ಬಳಿ ಸಿಗುವ ಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟಿದ್ದಾನೆ.
ಮಲ್ಪೆಯ ಈಶ್ವರ ಎಂಬುವವರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related