23.2 C
Shimoga
Sunday, November 27, 2022

ಕಾಶಿ ವಿಶ್ವನಾಥ ದೇವಸ್ಥಾನದ ವಾರ್ಷಿಕೋತ್ಸವ ಮತ್ತು ರುದ್ರಾಭೀಷೇಕ


ರಿಪ್ಪನ್‌ಪೇಟೆ: ಸಮೀಪದ ಕುಕ್ಕಳಲೇ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಮತ್ತು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಯವರಿಂದ ರುದ್ರಾಭೀಷೇಕ ಕಾರ್ಯಕ್ರಮ ಜರುಗಿತು.


ರುದ್ರಾಭೀಷೇಕ ಕಾರ್ಯಕ್ರಮದ ನಂತರ ಮಳಲಿಮಠದ ಶ್ರೀಗಳು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ, ಗ್ರಾಮದಲ್ಲಿನ ದೇವಸ್ಥಾನದ ದೇವರಿಗೆ ವರ್ಷದಲ್ಲಿ ರುದ್ರಾಭಿಷೇಕ ಮತ್ತು ಅಭಿಷೇಕ ಪೂಜೆ ಮಾಡುವುದರಿಂದ ಶಕ್ತಿ ವೃದ್ದಿಸುವುದು ಮತ್ತು ಗ್ರಾಮದಲ್ಲಿ ಶಾಂತಿ ನೆಮ್ಮದಿಯಿಂದ ಇರುವುದರೊಂದಿಗೆ ಸರ್ವರು ಸಂಘಟಿತರಾಗಿ ಸಾಮರಸ್ಯದಿಂದಿರಲು ಸಹಕಾರಿಯಾಗುವುದು.


ಜಾತಿ ಬೇಧ ಭಾವನೆ ದೂರವಾಗಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಗ್ರಾಮದ ಅಭಿವೃದ್ದಿಯಾಗಲು ಧಾರ್ಮಿಕ ಆಚರಣೆಗಳು ಪೂರಕವೆಂದರು.


ಈ ಸಂದರ್ಭದಲ್ಲಿ ಪುರೋಹಿತ ಪಂಚಾಕ್ಷರಯ್ಯ,ಕಾಶಿ ವಿಶ್ವನಾಥ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಕೆ.ಬಿ.ನಾಗಭೂಷಣ, ಕೆ.ಬಿ.ಶಶಿಭೂಷಣ, ಕೆ.ಆರ್.ನಾಗರಾಜ್‌ಗೌಡ, ಕರಿಬಸಪ್ಪ, ಈಶ್ವರಪ್ಪಗೌಡ, ಯೋಗೇಂದ್ರ, ಪ್ರಕಾಶಗೌಡ, ಉಮೇಶ್‌ಗೌಡ, ಷಣ್ಮುಖಪ್ಪ, ದಾನೇಶ್‌ಗೌಡ, ಶಿವಪ್ಪ, ವಿಶ್ವ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!