23.2 C
Shimoga
Sunday, November 27, 2022

ಕಿತ್ತೂರು ಇತಿಹಾಸದಲ್ಲಿ ರಾಣಿ ಚೆನ್ನಮ್ಮನವರ ಹೆಸರು ಸದಾ ಶಾಶ್ವತ ; ವಿನಯ್ ಕುಮಾರ್ ಆರಾಧ್ಯ


ಹೊಸನಗರ: ಕಿತ್ತೂರಿನ ರಾಜ ಮನೆತನದ ಹೆಸರಿನಲ್ಲಿ ಧೈರ್ಯ ಸಾಹಸಕ್ಕೆ ಹಾಗೂ ಆಡಳಿತ ವೈಖರಿಯಲ್ಲಿ ಕರ್ನಾಟಕ ಇತಿಹಾಸದಲ್ಲಿ ಸದಾ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿದವರು ಕಿತ್ತೂರು ರಾಣಿ ಚನ್ನಮ್ಮನವರು ಎಂದು ಹೊಸನಗರ ತಾಲ್ಲೂಕು ಕಛೇರಿಯ ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಕುಮಾರ್ ಎಂ ಆರಾಧ್ಯರವರು ಹೇಳಿದರು.


ಹೊಸನಗರ ತಾಲ್ಲೂಕು ಕಚೇರಿಯ ಆವರಣದಲ್ಲಿ ಸರ್ಕಾರದ ಸುತ್ತೋಲೆಯಂತೆ ರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಆಚರಿಸಲಾಗಿದ್ದು ಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಮಾತನಾಡಿದರು.


ಚೆನ್ನಮ್ಮನವರು ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಆಗ್ರ ಪಂಥಿಗೆ ಸೇರಿದ ಸ್ವಾತಂತ್ರ್ಯ ಅಭಿಮಾನದ ಸಾಕಾರ ಮೂರ್ತಿ ಕಿತ್ತೂರು ರಾಣಿ ಚೆನ್ನಮ್ಮನವರಾಗಿದ್ದು ಕಿತ್ತೂರು ಸಾಮಾಜ್ಯವನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಪ್ರಾಣವನ್ನು ಲೆಕ್ಕಿಸದೇ ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ಎದುರು ಸಾಹಸ ಕೆಚ್ಚುಗಳ ಮೂಲಕ ಹೋರಾಟ ನಡೆಸಿದ ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೆರಿಸಿದೆ ಎಂದರು.


ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಉಪತಹಶೀಲ್ದಾರ್ ಹುಚ್ಚರಾಯಪ್ಪ ಪ್ರಥಮ ದರ್ಜೆ ಗುಮಾಸ್ಥರಾದ ಮಂಜುಳಾ, ಪ್ರವೀಣ್ ಹಾಗೂ ತಾಲ್ಲೂಕು ಕಛೇರಿಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!