ಕಿಮ್ಮನೆ ನೇತೃತ್ವದ ಪಾದಯಾತ್ರೆ ಪ್ರಾರಂಭ ; ಯಾರೆಲ್ಲ ಭಾಗಿಯಾಗಿದ್ದಾರೆ ಗೊತ್ತಾ ?

0
846

ತೀರ್ಥಹಳ್ಳಿ : ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಪುಸ್ಥಕ ಸಮಿತಿಯನ್ನ ಮುಂದುವರೆಸಬೇಕು ಕುವೆಂಪುರವರನ್ನ ಅವಮಾನಿಸಿದ ರೋಹಿತ್ ಚಕ್ರತೀರ್ಥರ ಪಠ್ಯಪುಸ್ತಕ ಸಮಿತಿಯನ್ನ ಕೈಬಿಡಬೇಕೆಂದು ಆಗ್ರಹಿಸಿ ಹಮ್ಮಿಕೊಳ್ಳಲಾದ ಪಾದಯಾತ್ರೆ ಕುಪ್ಪಳ್ಳಿಯಿಂದ ಆರಂಭವಾಗಿದೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕುವೆಂಪುರವರ ಜನ್ಮಸ್ಥಳ ಕುಪ್ಪಳ್ಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಪ್ರಗತಿಪರರು ಸಾಥ್ ನೀಡಿದ್ದಾರೆ.

ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪುರವರ ಸಮಾಧಿಗೆ ಪುಷ್ಪ ನಮನವನ್ನು ಸಲ್ಲಿಸಿ ಕಿಮ್ಮನೆ ರತ್ನಾಕರ್, ಪಾದಯಾತ್ರೆಯನ್ನು ಆರಂಭಿಸಿ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವ ನಾಗೇಶರವರು ಮಾಡಿದ ಅಧ್ವಾನವನ್ನ ಕೈಬಿಡಬೇಕು, ಬಿಜೆಪಿಯ ಹೊಸ ಹೊಸ ಕಾರ್ಯಕ್ರಮವನ್ನ ಅನುಷ್ಠಾನಗೊಳಿಸಲು ನಮ್ಮ ವಿರೋಧವಿಲ್ಲ. ಆದರೆ ಚರ್ಚೆ ನಡೆಸಬೇಕು. ಸದನದಲ್ಲಿ ಚರ್ಚೆ ಮಾಡಬೇಕು. ವಿಷಯವಾರು ಸಮಿತಿ ರಚನೆ ಮಾಡಿ ಇಂತಹ ವಿಷಯವನ್ನ ಜಾರಿಗೊಳಿಸುತ್ತೇವೆ ಎಂಬುದನ್ನ ತಿಳಿಸಿ ನಂತರ ಅನುಷ್ಠಾನಗೊಳಿಸಬೇಕು ಎಂದರು.

ಪಾದಯಾತ್ರೆಯಲ್ಲಿ ಹಂಸಲೇಖ, ಸಾಹಿತಿಗಳಾದ ಜಿ.ಸಿದ್ದರಾಮಯ್ಯ, ಪ್ರೊಚೆನ್ನಿ, ವಕೀಲ ಶ್ರೀಪಾಲ, ನಾ.ಡಿಸೋಜ, ಡಿಎಸ್ ಎಸ್ ಗುರುಮೂರ್ತಿ, ರೈತ ಸಂಘಟನೆಯ ಕೆ.ಟಿ.ಗಂಗಾಧರ್, ಜಿಲ್ಲಾ ಕಸಾಪದ ಅಧ್ಯಕ್ಷ ಡಿ.ಮಂಜುನಾಥ್ ಸೇರಿ ಹಲವರು ಭಾಗಿಯಾಗಿದ್ದಾರೆ.

ವರದಿ : ಅಕ್ಷಯ್ ಕುಮಾರ್
ಜಾಹಿರಾತು

LEAVE A REPLY

Please enter your comment!
Please enter your name here