ಕುಂಕುಮ, ಬಳೆ, ಕಾಲುಂಗುರ ಭಾರತೀಯ ನಾರಿಯರಿಗೆ ಸಂಸ್ಕೃತಿಯ ಹೆಮ್ಮೆಯ ಪ್ರತೀಕ: ಅವಧೂತ ವಿನಯ್ ಗುರೂಜಿ

0
504

ರಿಪ್ಪನ್‌ಪೇಟೆ: ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮ, ಬಳೆ, ಕಾಲುಂಗುರಗಳಿಗೆ ಹೆಚ್ಚು ಮಹತ್ವವಿದ್ದು ಅದಕ್ಕಿರುವಷ್ಟು ಗೌರವ ಇನ್ನಾವುದಕ್ಕೂ ಇಲ್ಲ ಇತ್ತೀಚಿನ ದಿನಮಾನಗಳಲ್ಲಿ ಕೆಲವು ಮಹಿಳೆಯರು ಬಿಚ್ಚೂಲೆ ಗೌರಮರಂತೆ ಎಲ್ಲವನ್ನು ತೊರೆದಿರುವುದು ಮಹಿಳೆಯರಿಗೆ ಶೋಭೆ ತರದು ಎಂದು ಗೌರಿಗದ್ದೆ ಅವಧೂತ ವಿನಯ್ ಗುರೂಜಿ ವಿಷಾದ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾವರ್ಧಂತ್ಯುತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಗವಂತನ ಸ್ಮರಣೆಯಿಂದ ಭಕ್ತರಲ್ಲಿ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ಜಗತ್ತಿನಲ್ಲಿ ಭಾರತೀಯ ನಾರಿಯರಿಗಿರುಷ್ಟು ಗೌರವ ಇನ್ನಾವ ದೇಶದಲ್ಲಿ ಕಾಣಲು ಸಾಧ್ಯವಿಲ್ಲ,ಅಂತಹ ಸರ್ವಶ್ರೇಷ್ಟ ಶ್ರೀಮಂತ ಸಂಸ್ಕೃತ ಬೇರೆ ಎಲ್ಲೂ ಸಿಗದು ಅಂತಹ ದೇಶದಲ್ಲಿ ಜನ್ಮ ತಾಳಿರುವುದು ನಮ್ಮ ಪುಣ್ಯವಾಗಿದೆ. ಗೋ ಸಾಕಾಣಿಕೆಯಿಂದ ನಮ್ಮ ಭೂಮಿಯಲ್ಲಿನ ದೋಷವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಭೂಮಿ ತಾಯಿಯನ್ನು ಶುದ್ದಗೊಳಿಸಿದಂತೆ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ದೇವಸ್ಥಾನದ ದೇವರ ಮೂರ್ತಿಯನ್ನು ಶುದ್ದುಗೊಳಿಸುವ ಕಾರ್ಯ ನಡೆಯಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯವರನ್ನು ವೃದ್ದಾಶ್ರಮಕ್ಕೆ ಕಳುಹಿಸುತ್ತಿದ್ದಾರೆ ಇದೊಂದು ದುರಂತದ ಸಂಗತಿಯಾಗಿದೆ ಇನ್ನಾದರೂ ಮಕ್ಕಳು ಹೆತ್ತವರನ್ನು ಪಾಲನೆ ಷೋಷಣೆ ಮಾಡುವ ಮೂಲಕ ಅವರ ಸೇವೆಯ ಮೂಲಕ ಭಗವಂತನ ದರ್ಶನ ಪಡೆಯಲು ಸಾಧ್ಯವೆಂದು ವಿದ್ಯಾವಂತ ಯುವ ಸಮೂಹಕ್ಕೆ ತಿಳಿ ಹೇಳಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಎನ್.ಕಾಮತ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್, ಎಂ.ಸುರೇಶ್‌ಸಿಂಗ್, ಎಂ.ಡಿ.ಇಂದ್ರಮ್ಮ, ಸರಸ್ವತಿ ರಾಘವೇಂದ್ರ, ಪದ್ಮಾಸುರೇಶ್, ಜಯಲಕ್ಷ್ಮಿ ಮೋಹನ್, ನಾಗರತ್ನ ದೇವರಾಜ್, ಮಹಾಲಕ್ಷ್ಮಿ ಅಣ್ಣಪ್ಪ, ಆಶಾ ಸತೀಶ್, ಆರ್.ಟಿ.ಗೋಪಾಲ್, ಸುಧೀಂದ್ರ ಪೂಜಾರಿ, ಸುಧೀರ್, ಮುರುಳಿಧರ, ಶಶಿಧರ ಪೈ, ಆರ್.ರಂಗಸ್ವಾಮಿ, ಗಣೇಶ್‌ಪ್ರಸಾದ್, ಆರ್.ರಾಘವೇಂದ್ರ, ಕೆ.ಎ.ಅರವಿಂದ, ಲಕ್ಷ್ಮಣ, ಮಂಜುನಾಥ ಕಾಮತ್ ಇತರರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here